ಕುಂದಾಪುರ, ಏ 22 (Daijiworld News/MSP): ವ್ಯವಹಾರ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದರೂ ಕೂಡ ಪ್ರತಿ ಬಾರಿ ಮತದಾನಕ್ಕಾಗಿ ತಪ್ಪದೇ ಊರಿಗೆ ಆಗಮಿಸುವ ಎನ್.ಆರ್.ಐ. ಪೈಕಿ ಕುಂದಾಪುರ ಮೂಲದ ಪ್ರವೀಣ್ ಕುಮಾರ್ ಶೆಟ್ಟಿ ಕೂಡ ಒಬ್ಬರು.ಇವರು ಯುನೈಟೆಡ್ ಅರಬ್ ಎಮರೇಟ್ಸ್ ನಲ್ಲಿ ಪ್ರಸಿದ್ಧ ಹೋಟೆಲ್ ಉದ್ಯಮಿಯಾಗಿ ಬೆಳೆದಿರುವ ಫಾರ್ಚ್ಯೂನ್ ಗ್ರೂಪ್ಸ್ ಮುಖ್ಯಸ್ಥರು. ಮೂಲತಃ ಕುಂದಾಪುರದ ವಕ್ವಾಡಿಯವರಾದ ಪ್ರವೀಣ್ ಪ್ರತೀ ಬಾರಿಯೂ ಚುನಾವಣೆಯ ಸಂದರ್ಭದಲ್ಲಿಯೂ ಮತದಾನ ಮಾಡುವ ಉದ್ದೇಶದಿಂದಲೇ ತವರೂರಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಾರೆ.
ದುಬೈನಿಂದ ನೂರಾರು ಕನ್ನಡಿಗರು ಮತದಾನಕ್ಕಾಗಿ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ನಮ್ಮೆಲ್ಲರ ಹೆಮ್ಮ, ಕರಾವಳಿಯಲ್ಲೂ ಮೋದಿಯವರ ಹವಾ ಜಾಸ್ತಿ ಇದೆ. ಭಾರತದಲ್ಲಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ದುಬೈನಲ್ಲಿ ಅನಿವಾಸಿ ಭಾರತೀಯರಿಗೆ ಗೌರವ ಹೆಚ್ಚಿದೆ. ದೇಶದಲ್ಲಿ ಈ ಬಾರಿ ಮುನ್ನೂರಕ್ಕೂ ಅಧಿಕ ಸೀಟು ಬಿಜೆಪಿ ಪಡೆದು ಹೆಮ್ಮೆಯ ಮೋದಿಜಿ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.