ಉಳ್ಳಾಲ, ಜ 13 (DaijiworldNews/MS): ಮೀನುಗಾರಿಕೆಗೆ ನಡೆಸುವ ಸಂದರ್ಭದಲ್ಲಿ ಮೀನಿಗೆ ಹಾಕಿದ್ದ ಬಲೆ ಎಳೆಯುವ ಸಂದರ್ಭದಲ್ಲಿ ಸಮುದ್ರಕ್ಕೆ ಜಾರಿ ಬಿದ್ದು, ಮೀನುಗಾರರೊಬ್ಬರು ಮೃತಪಟ್ಟಿದ್ದು, ಸಹ ಮೀನುಗಾರರು ಅಳ ಸಮುದ್ರದಲ್ಲಿ ಮುಳುಗಿದ್ದ ಮೀನುಗಾರನನ್ನು ಮೇಲಕ್ಕೆ ಎತ್ತುವ ಸಂದರ್ಭದಲ್ಲೇ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.
ಉಳ್ಳಾಲ ಸಮುದ್ರದಿಂದ ಕೆಲವು ಮಾರು ದೂರ ಈ ಘಟನೆ ನಡೆದಿದ್ದು, ಮೊಗವೀರಪಟ್ಣ ನಿವಾಸಿ ತುಳಸೀರಾಮ್ (62) ಮೃತಪಟ್ಟ ಮೀನುಗಾರ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಘಟನೆಯ ವಿವರ : ಮೊಗವಿಇರಪಟ್ಣ ನಿವಾಸಿ ಕಿರನ್ ಪುತ್ರನ್ ಅವರಿಗೆ ಸೇರಿದ್ದ `ವಾಸವಿ' ಪರ್ಸಿನ್ ಬೋಟ್ನಲ್ಲಿ ತುಳಸಿರಾಮ್ ಸೇರಿದಂತೆ 30 ಜನ ಮೀನುಗಾರರು ಗುರುವಾರ ರಾತ್ರಿ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರ ಮದ್ಯದಲ್ಲಿ ಬಲೆ ಹಾಕಿ ಮಲಗಿದ್ದ ಅವರು ಬೆಳಗ್ಗೆ ಬಲೆಯನ್ನು ಎಳೆಯುತ್ತಿದ್ದಾಗ ತುಳಸೀರಾಮ್ ಆಯ ತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ತಕ್ಷಣ ಸಹ ಮೀನುಗಾರರಾದ ಜಿತೇಂದ್ರ ಬಂಗೇರ ಮತ್ತು ಪ್ರಥ್ವಿನ್ ಸಮುದ್ರಕ್ಕೆ ಹಾರಿ ರಕ್ಷಿಸಲು ಯತ್ನಿಸಿದರು ಅದಾಗಲೇ ಮುಳುಗಿದ್ದ ತುಳಸೀರಾಮ್ ಸಮುದ್ರದಲ್ಲೇ ಮೃತಪಟ್ಟಿದ್ದು, ಮೃತದೇಹವನ್ನು ಮೇಲೆಕ್ಕೆ ತಮದು ಬಳಿಕ ಉಳ್ಳಾಲಕ್ಕೆ ತರಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.