ಉಳ್ಳಾಲ, ಜ 13 (DaijiworldNews/MS): ಮೀನುಗಾರಿಕೆಗೆ ತೆರಳಿದ್ದ ದೋಣಿಯ ಹಗ್ಗ ತುಂಡಾಗಿ ಸಮುದ್ರದ ನಡುವೆ ಕಲ್ಲೊಂದಕ್ಕೆ ಬಡಿದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮೊಗವೀರಪಟ್ಣ ಸಮೀಪದ ಆಳ ಸಮುದ್ರದಲ್ಲಿ ನಡೆದಿದೆ.
ಮೂಲತ: ತಿರುವನಂತಪುರ ನಿವಾಸಿ ಮೊಗವೀರಪಟ್ಣದಲ್ಲಿ ನೆಲೆಸಿದ್ದ ಮೈಕಲ್ (60) ಎಂಬವರಾಗಿದ್ದು, ಮಹಮ್ಮದ ಕಲಂದರ್ ಷಾ ಮಾಲಕತ್ವದ ನಾಡದೋಣಿಯಲ್ಲಿ ಮೈಕಲ್ ಸೇರಿದಂತೆ ಖಲೀಲ್, ಯಾಸಿರ್ ಅರಾಫತ್ ಮೀನುಗಾರಿಕೆಗೆ ತೆರಳಿದ್ದು. ಸಮುದ್ರದ ಮದ್ಯದಲ್ಲಿ ಬಂಡೆಯೊಂದರ ಸಮೀಪ ಮೀನು ಹಿಡಿಯಲು ಬಲೆ ಬೀಸಿ ದೋಣಿಯನ್ನು (ಕೊಲೈ) ಹಾಕಿ ಕುಳಿತಿದ್ದರು. ಈ ಸಂದರ್ಭದಲ್ಲಿ ಬೀಸಿದ ಗಾಳಿಗೆ ಹಗ್ಗ ತುಂಡಾಗಿ ದೂಣಿ ನೇರವಾಗಿ ಕಲ್ಲಿಗೆ ಬಡಿದಿದ್ದು, ಕಲ್ಲಿಗೆ ಬಡಿದ ರಭಸಕ್ಕೆ ದೋಣಿಯ ಇಂಜಿನ್ ಚಾಲನೆ ನಡೆಸುತ್ತಿದ್ದ ಮೈಕಲ್ ತಲೆ ದೋಣಿಯ ಮರದ ತುಂಡಿಗೆ ಬಡಿದು ಸಮುದ್ರಕ್ಕೆ ಬಿದ್ದಿದ್ದು, ಸಹ ಮೀನುಗಾರರು ಮೈಕಲ್ನನ್ನು ಮೇಲಕ್ಕೆತ್ತಿದ್ದು ಅದಗಲೇ ಮೃತಪಟ್ಟಿದ್ದ ಮೈಕಲ್ ಮೃತದೇಹವನ್ನು ಬೇರೆ ಬೇರೆ ಮೀನುಗಾರಿಕಾ ಬೋಟ್ನ ಸಹಾಯದಿಂದ ದಡಕ್ಕೆ ತಂದಿದ್ದಾರೆ. ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.