ಉಡುಪಿ, ಜ 11 (DaijiworldNews/HR): ಭಾರತ್ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಕೇಂದ್ರದ ನರೇಂದ್ರ ಮೋದಿ ನೇತ್ರತ್ವದ ಸರಕಾರ ಪ್ರಾರಂಭಿಸಿದ ಅಮೃತ ಭಾರತ ರೈಲು ನಿಲ್ದಾಣಗಳ ಅಭಿವೃದ್ಧಿ ಯೋಜನೆಯಡಿ ಉಡುಪಿ ರೈಲ್ವೆ ನಿಲ್ದಾಣವನ್ನು ಆಯ್ಕೆ ಮಾಡಿರುವುದಕ್ಕೆ ಈ ಬಗ್ಗೆ ಪ್ರಸ್ತಾಪಿಸಿದ್ದ ಕೇಂದ್ರ ಸಚಿವೆ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತೀಯ ರೈಲ್ವೆ ನರೇಂದ್ರ ಮೋದಿ ಹಾಗೂ ಅಶ್ವಿನಿ ವೈಷ್ಣವ್ ನೇತ್ರತ್ವದಲ್ಲಿ ಅಭೂತಪೂರ್ವ ಪ್ರಗತಿಯತ್ತ ದಾಪುಗಾಲಿಕ್ಕುತ್ತಿರುವ ಈ ಸುಸಂದರ್ಭದಲ್ಲಿ "ಅಮೃತ್ ಭಾರತ್" ಯೊಜನೆಯ ಮೂಲಕ ಉಡುಪಜ ರೈಲು ನಿಲ್ದಾಣವನ್ನು ಸಂಪುರ್ಣ ಆಧುನೀಕರಿಸಿ ವಿಶ್ವದರ್ಜೆಯ ಪ್ರಯಾಣಿಕ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ.ತನ್ಮೂಲಕ ಶೈಕ್ಷಣಿಕ ಕೇಂದ್ರ ಮಣಿಪಾಲ,ಧಾರ್ಮಿಕ ಕೇಂದ್ರ ಉಡುಪಿ ಹಾಗೂ ಬಂದರು ನಗರಿ ಮಲ್ಪೆಗೆ ಸಂಭಂದಿಸಿದ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಅಮೃತ್ ಭಾರತ್ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಲು ರೈಲ್ವೆ ಇಲಾಖೆಗೆ ಸೂಚಿಸಲಾಗುವುದು ಎಂದು ಶೋಭಾ ಕರಂದ್ಲಾಜೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.