ಮಂಗಳೂರು, ಜ 11 (DaijiworldNews/HR): ಸ್ಟೇಟ್ಬ್ಯಾಂಕ್ನಲ್ಲಿರುವ ಸಿಟಿ ಬಸ್ ನಿಲ್ದಾಣವು ಮಂಗಳೂರಿನ ಪ್ರಮುಖ ಸ್ಥಳವಾಗಿದ್ದು, ಸಾರ್ವಜನಿಕರು ಬಸ್ ನಿಲ್ದಾಣಕ್ಕೆ ಪ್ರವೇಶಿಸಿದಾಗ ಮೂತ್ರದ ದುರ್ವಾಸನೆ ಮತ್ತು ಬಸ್ ನಿಲ್ದಾಣದ ಸುತ್ತಲೂ ಕಸದ ರಾಶಿಯು ತುಂಬಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.
ಮಂಗಳೂರು ಬಸ್ ನಿಲ್ದಾಣದಲ್ಲಿ ಎರಡು ಸಾರ್ವಜನಿಕ ಶೌಚಾಲಯಗಳಿದ್ದರು, ಬಸ್ ಕಂಡಕ್ಟರ್ಗಳು, ಚಾಲಕರು ಮತ್ತು ಸಾರ್ವಜನಿಕರು ಬಸ್ ನಿಲ್ದಾಣದ ಗೋಡೆಗಳಿಗೆ ಮಾಡುವ ಮೂತ್ರವು ಹೊಸದಾಗಿ ನಿರ್ಮಿಸಲಾದ ಕಾಲುದಾರಿಗೆ ಹರಿಯುತ್ತದೆ.
ಇನ್ನು ಕಾಲುದಾರಿ ಪಾದಚಾರಿಗಳಿಗಾಗಿ ಮಾಡಲಾಗಿದ್ದು, ದುರ್ವಾಸನೆಯಿಂದಾಗಿ ಪಾದಚಾರಿಗಳು ಕಾಲುದಾರಿಯಲ್ಲಿ ನಡೆಯಲು ಸಾಧ್ಯವಾಗುವುತ್ತಿಲ್ಲ. ಸಾರ್ವಜನಿಕರು ಹಾಗೂ ಬಸ್ ಚಾಲಕರು ನಿರಂತರ ಮೂತ್ರ ವಿಸರ್ಜನೆ ಮಾಡಿದ್ದರಿಂದ ಕಾಲುದಾರಿ ಕೂಡ ಕಪ್ಪು ಬಣ್ಣಕ್ಕೆ ತಿರುಗಿದೆ.
ಪಾದಚಾರಿಗಳಿಗೆ ಪಾದಚಾರಿ ಮಾರ್ಗವನ್ನು ನಿರ್ಮಿಸಲು ಲಕ್ಷಗಟ್ಟಲೆ ಹಣ ಖರ್ಚು ಮಾಡಲಾಗಿದೆ. ಆದರೆ ಬಸ್ ನಿಲ್ದಾಣದಲ್ಲಿ ಬಸ್ ಚಾಲಕರು, ಕಂಡಕ್ಟರ್ಗಳು, ಸಾರ್ವಜನಿಕರ ತೊಂದರೆಯಿಂದಾಗಿ ಪಾದಚಾರಿಗಳಿಗೆ ಫುಟ್ ಪಾತ್ ಬಳಕೆಯಾಗದೆ ಉಳಿದಿದೆ.
ಬಸ್ ಚಾಲಕರೊಬ್ಬರು ಮಾತನಾಡಿ, 'ಬಸ್ ಡ್ರೈವರ್ಗಳು ಮತ್ತು ಕಂಡಕ್ಟರ್ಗಳಿಗೆ ಸಮಯ ಮಿತಿ ಇರುವುದರಿಂದ ಗೋಡೆಗಳಿಗೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಅದನ್ನು ನೋಡುವಾಗ ಸಾರ್ವಜನಿಕರೂ ಅದನ್ನೇ ಅನುಸರಿಸುತ್ತಾರೆ. ಸಾರ್ವಜನಿಕ ಶೌಚಾಲಯವು ಬಸ್ ನಿಲ್ದಾಣದ ಇನ್ನೊಂದು ಬದಿಯಲ್ಲಿರುವ ಬಸ್ ನಿಲುಗಡೆಯಿಂದ 200 ಮೀಟರ್ ದೂರದಲ್ಲಿದೆ. ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಲು ಸಾರ್ವಜನಿಕ ಶೌಚಾಲಯವನ್ನು ಬಳಸದೆ ಗೋಡೆಗಳಿಗೆ ಮೂತ್ರ ವಿಸರ್ಜನೆ ಮಾಡುತ್ತಾರೆ. ನಮ್ಮ ಬಸ್ ಪಾರ್ಕಿಂಗ್ ಆ ಗೋಡೆಯ ಪಕ್ಕದಲ್ಲಿದೆ, ಮೂತ್ರದ ದುರ್ವಾಸನೆಯಿಂದ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ. ತುರ್ತು ಉದ್ದೇಶಕ್ಕಾಗಿ ಬಸ್ ನಿಲ್ದಾಣದ ಸಮೀಪವೇ ಇನ್ನೊಂದು ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎಂದು ಮನವಿ ಮಾಡಿದ್ದಾರೆ.