ಪುತ್ತೂರು, ಜ 11 (DaijiworldNews/HR): ನವೆಂಬರ್ ತಿಂಗಳಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್(ಸಿ.ಎ) ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್ ಉತ್ತೀರ್ಣರಾಗಿದ್ದಾರೆ.
ಕೃತಿಕಾ ಎ.ಎಸ್ ಅವರು ವಿದ್ಯಾಭ್ಯಾಸವನ್ನು ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪಡೆದಿದ್ದು, ಬಳಿಕ ಪುತ್ತೂರಿನ ಸಿ.ಎ ರಾಮಭಟ್ ಹಾಗು ಸಿ.ಎ ಅರವಿಂದ ಕೃಷ್ಣ ಇವರಲ್ಲಿ ಮಾರ್ಗದರ್ಶನ ಪಡೆದಿದ್ದಾರೆ.
ಇನ್ನು ಕೃತಿಕಾ ಎ.ಎಸ್ ಅವರು ಬಿಎಸ್ಎನ್ಎಲ್ ನಿವೃತ್ತ ಉಪಮಂಡಲ ಅಧಿಕಾರಿ ಕಲ್ಲಾರೆ ಎ ಸೀತಾರಾಮ ಗೌಡ ಹಾಗು ಚಂದ್ರಾವತಿ ದಂಪತಿಯ ಪುತ್ರಿಯಾಗಿದ್ದಾರೆ.