ಬಳ್ಪ, ಜ 11 (DaijiworldNews/MS): ಬಿಜೆಪಿ ಸಭೆಯಿಂದ ಹೊರ ಬಂದಿದ್ದೇನೆ ಅನ್ನುವುದು ಸತ್ಯಕ್ಕೆ ದೂರವಾದ ಮಾತು, ಅಲ್ಲಿ ಯಾರ ಪರ ವಿರೋಧ ಅಭಿಪ್ರಾಯದ ಸಭೆ, ಚರ್ಚೆ ನಡೆದಿಲ್ಲ ಎಂದು ಕೇಂದ್ರ ರಾಸಾಯನಿಕ,ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಭಗವಂತ ಖೂಬ ಹೇಳಿದ್ದಾರೆ.
ಬಳ್ಪ-ಕೇನ್ಯದ ಗ್ರಾಮ ಉತ್ಸವ ಸಮಿತಿ ಆಶ್ರಯ ದಲ್ಲಿ ಹಮ್ಮಿಕೊಂಡಿದ್ದ ಸಂಸದರ ಆದರ್ಶ ಗ್ರಾಮದ ಗ್ರಾಮೋತ್ಸವ -2024 ಕಾರ್ಯ ಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದರು.
ಸಭೆಯಲ್ಲಿ ಪ್ರತೀ ಲೋಕಸಭಾ ಕ್ಷೇತ್ರದ ಸ್ಥಿತಿಗತಿ ಹಾಗೂ ವಿಚಾರ ಚರ್ಚೆ ಆಗಿದೆ.ವಿರೋಧ ಪಕ್ಷದ ಚಟುವಟಿಕೆಗಳ ಬಗ್ಗೆ ಮಾತ್ರ ಲೋಕಸಭಾ ಸಿದ್ದತಾ ಸಭೆ ನಡೆದಿದೆ.ಟಿಕೆಟ್ ಹಂಚಿಕೆ ಕೇಂದ್ರದವರು ಅನೇಕ ಆಯಾಮ ಮತ್ತು ಮಾನದಂಡಗಳಲ್ಲಿ ಮಾಡ್ತಾರೆ.ಅದು ಬಿಟ್ಟು ಅಂತ ಯಾವುದೇ ಘಟನೆ ನಡೆದಿಲ್ಲ, ಅದು ಸತ್ಯಕ್ಕೆ ದೂರವಾಗಿದೆ. ನಿನ್ನೆ ರಾತ್ರಿ ಬಂದ ನನ್ನ ಟಿಪಿ ನೋಡಿ, ಅದರಲ್ಲಿ 12 ಗಂಟೆಗೆ ಹೊರಡಬೇಕು ಅಂತ ಇದೆ.ನಾನು ರಾಜ್ಯಾಧ್ಯಕ್ಷರ ಅನುಮತಿ ಕೇಳಿಯೇ ಹೊರಗೆ ಬಂದಿದ್ದೇನೆ..ಸಂಜೆ 5 ಗಂಟೆ ಹೊತ್ತಿಗೆ ಕಡಬದ ಬಲ್ಪದ ಕಾರ್ಯಕ್ರಮಕ್ಕೆ ಬರಬೇಕಿತ್ತು
ಇದನ್ನ ಒಂದು ತಿಂಗಳ ಹಿಂದೆಯೇ ನಾನು ಒಪ್ಪಿಕೊಂಡಿದ್ದೇನೆ.ಹೀಗಾಗಿ ಬೀದರ್ ಮತ್ತು ಕಲಬುರ್ಗಿ ಚರ್ಚೆ ಮುಗಿಸಿ ಹೊರ ಬಂದೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಅಸಮಾಧಾನಕ್ಕೆ ಪಕ್ಷದಲ್ಲಿ ಯಾವ ಸ್ಥಾನವೂ ಇಲ್ಲ. ಅವರು ಹೇಳಬಹುದು, ಆದರೆ ಅವರು ಹೇಳಿದ ತಕ್ಷಣ ವರಿಷ್ಠರು ಮಾಡಬೇಕು ಅಂತ ಇಲ್ಲ
ಒಂದು ವ್ಯವಸ್ಥೆ ಇರುತ್ತೆ, ಎಲ್ಲರನ್ನೂ ಕೂಡಿಸೋದು, ಅದು ಪಕ್ಷದಲ್ಲಿ ನಡೆಯುತ್ತೆ.ಯಾರ ಅಸಮಾಧಾನವೂ ಪಕ್ಷದಲ್ಲಿ ಕೆಲಸಕ್ಕೆ ಬರಲ್ಲ.ತಮ್ಮ ಅಭಿಪ್ರಾಯ ಕೇಳಿದಾಗ ಹೇಳುವ ವ್ಯವಸ್ಥೆ ಪಕ್ಷದಲ್ಲಿ ಇದೆ. ಹೀಗಾಗಿ ಇಂಥದ್ದರಲ್ಲಿ ಅಸಮಾಧಾನಕ್ಕೆ ಯಾವುದೇ ಆಸ್ಪದ ಇಲ್ಲ ಎಂದ ಅವರು
ಸ್ವಾತಂತ್ರ್ಯ ಭಾರತದ ನೆಹರೂ, ಇಂದಿರಾ ಮತ್ತು ಈಗಿನ ಕಾಂಗ್ರೆಸ್ ಮನಸ್ಥಿತಿ ತುಷ್ಟೀಕರಣ ಮಾತ್ರ ಅಲ್ಲ. ಇವರದ್ದು ಓಲೈಕೆ ರಾಜಕಾರಣ ಅಂತ ಇವತ್ತು ಸ್ಪಷ್ಟವಾಗಿದೆ.
ದೇಶದ ಸಂಸ್ಕೃತಿ ಮತ್ತು ಅಸ್ಮಿತೆಗೆ ವಿರುಧ್ಧವಾಗಿ ಕಾಂಗ್ರೆಸ್ ನಡೆದುಕೊಂಡಿದೆ. ಅಲ್ಪಸಂಖ್ಯಾತರ ತುಷ್ಟಿಕರಣ ರಾಜನೀತಿಗೆ ಇದೊಂದು ಕೈಗನ್ನಡಿ.ಎಲ್ಲಾ ಧರ್ಮದವರು ಕಾಂಗ್ರೆಸ್ ನ್ನ ರಾಜಕಾರಣದಿಂದ ದೂರ ಇಡಬೇಕು
ಸಿದ್ದರಾಮಯ್ಯ ಹೆಸರಲ್ಲೇ ರಾಮ ಎನ್ನುವಂಥದ್ದು ಇದೆ ಅವರು ಬೆಳೆದ ಸಂಸ್ಕೃತಿ, ಪರಂಪರೆಯನ್ನ ಅವರು ಮರೆತಿದ್ದಾರೆ.ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿಯೋದು ನೀಚ ರಾಜಕಾರಣ ಎಂದಿದ್ದಾರೆ.
ರಾಮಮಂದಿರ ಉದ್ಘಾಟನೆಯಿಂದ ಕಾಂಗ್ರೆಸ್ ಹೊರಗುಳಿದ ವಿಚಾರವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ರಾಮಮಂದಿರ ಹೋರಾಟಗಳ ಹೊತ್ತಲ್ಲೇ ಕಾಂಗ್ರೆಸ್ ಟೀಕೆ ಮಾಡಿತ್ತು. ರಾಮ ಹುಟ್ಟೇ ಇಲ್ಲ ಅಂತ ರಾಮನ ಹುಟ್ಟಿಗೆ ಸಾಕ್ಷಿ ಕೇಳಿತ್ತು. ರಾಮ ಪ್ರತಿಷ್ಠೆ ಹೊತ್ತಲ್ಲಿ ಇದೀಗ ಅವರ ಬುದ್ದಿ ತೋರಿಸಿದ್ದಾರೆ. ದೇಶದಲ್ಲಿ ರಾಮನನ್ನ ವಿರೋಧಿಸೋರು ಭಾರತೀಯ ಸಂಸ್ಕೃತಿಯ ವಿರೋಧಿಗಳು.ಇದು ಭಾರತವನ್ನೇ ವಿರೋಧಿಸೋ ಕಾಂಗ್ರೆಸ್ ನ ಮಾನಸಿಕತೆ. ಇವತ್ತು ಪಲಾಯನ ಮತ್ತು ಬಹಿಷ್ಕಾರದ ಮೂಲಕ ಓಲೈಕೆ ರಾಜಕಾರಣ ತೋರಿಸಿದ್ದಾರೆ.
ಮುಸಲ್ಮಾನರ ತುಷ್ಡೀಕರಣದ ಮೂಲಕ ಹಿಂದೂ ಸಮಾಜವನ್ನೇ ಎದುರು ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಕೇವಲ ರಾಮ ವಿರೋಧಿ ಅಷ್ಟೇ ಅಲ್ಲ, ಹಿಂದೂ ವಿರೋಧಿ ಅಯೋಧ್ಯೆಗಾಗಿ ಇಡೀ ದೇಶದ ಹಿಂದೂ ಸಮಾಜ ಒಂದಾಗಿದೆ.ಆರ್.ಎಸ್.ಎಸ್ ಮಂದಿರವಾಗಿದ್ರೆ ನಾಗ್ಪುರದಲ್ಲಿ ಮಾಡ್ತಾ ಇದ್ವಿ. ಆದರೆ ಇದು ಪ್ರಭು ಶ್ರೀರಾಮ ಚಂದ್ರನ ಮಂದಿರ, ಹಿಂದೂ ಸಮಾಜದ ಮಂದಿರ. ಬಿಜೆಪಿ ಅಲ್ಲ, ವಿಎಚ್ ಪಿ ಇದನ್ನ ಮಾಡಿದ್ದು ನೋಡಿಕೊಳ್ತಾ ಇದಾರೆ ಎಂದರು.
ಸಂಸದರ ಆದರ್ಶ ಗ್ರಾಮದಲ್ಲಿ ಮೂಲಸೌಕರ್ಯಗಳಿಗೆ ಒತ್ತು !
ಮೂಲ ಸೌಕರ್ಯ, ಕೆರೆ,ಶಾಲಾ ಕಟ್ಟಡ, ಪಂಚಾಯತ್, ಅಂಗನವಾಡಿ ಕಟ್ಟಡ, ರಸ್ತೆಯ ಅಭಿವೃದ್ಧಿ ಸೇರಿದಂತೆ ಸುಮಾರು 58ಕೋಟಿ ರೂಪಾಯಿಯ ಅನುದಾನ ಬಳ್ಪ -ಕೇನ್ಯ ಗ್ರಾಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರ ದಿಂದ ಆಗಿದೆ. ಇತಿಹಾಸವಿರುವ ಬೋಕಾಯನಕೆರೆ ಅಭಿವೃದ್ಧಿ ಯ ಮೂಲಕ ಇಡೀ ಗ್ರಾಮದ ಕೃಷಿಚಟುವಟಿಕೆ, ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿ ಗೆ ಸಹಕಾರಿಯಾಗಿದೆ.