ಮಂಗಳೂರು, ಜ 11 (DaijiworldNews/SK): ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದು ಗಲೀಜು ಮಾಡುತ್ತಿದ್ದ ವಾಹನ ಚಾಲಕನಿಗೆ ದಂಡ ವಿಧಿಸಿದ ಘಟನೆ ಮಂಗಳೂರಿನ ಪಡೀಲ್ ಜಂಕ್ಷನ್ ಬಳಿ ಬುಧವಾರ ನಡೆದಿದೆ.
ವಾಹನ ಚಾಲಕನೋರ್ವ ತಲಪಾಡಿ ಭಾಗದಿಂದ ತ್ಯಾಜ್ಯವನ್ನು ತಂದು ಪಡೀಲ್ ಜಂಕ್ಷನ್ನಲ್ಲಿ ಸುರಿಯುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಪಡೆದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಾಹನ ಚಾಲಕನಿಗೆ 5 ಸಾವಿರ ರೂ. ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ವಾಹನ ಚಾಲಕನಿಗೆ ಎಚ್ಚರಿಕೆ ನೀಡಿದ ಪಾಲಿಕೆ ಅಧಿಕಾರಿಗಳು, ಇದೇ ರೀತಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿವುದು ಮತ್ತೆ ಕಂಡುಬಂದರೆ ದಂಡ ಮೊತ್ತವನ್ನು ದ್ವಿಗುಣಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.