ಕಾಸರಗೋಡು , ಜ 10(DaijiworldNews/AK): ಬೈಕ್ ಕಳವು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಯನ್ನು ಆದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ರನ್ನು ಎಡನೀರು ಮುಂಡೋಲ್ ಮೂಲೆಯ ನಿತಿನ್ (18) , ಪೊವ್ವಲ್ ನ ಶರೀಫ್ (19), ಪೊವ್ವಲ್ ನ ಅಬ್ದುಲ್ ಲತೀಫ್ (36) ಎಂದು ಗುರುತಿಸಲಾಗಿದೆ.
ಆದೂರು ಸಿ. ಎ ನಗರದಲ್ಲಿ ಒಂದೇ ದಿನ ಎರಡು ಬೈಕ್ ಗಳನ್ನು ಕಳವು ಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಯುವಕರನ್ನು ನ್ಯಾಯಾಲಕ್ಕೆ ಹಾಗೂ ಮಕ್ಕಳನ್ನು ಬಾಲಾಪರಾಧಿ ಕೇಂದ್ರಕ್ಕೆ ಹಾಜರು ಪಡಿಸಲಾಯಿತು. ಅಂಗಡಿ ಮುಂಭಾಗ ಅಜಿತ್ ಕುಮಾರ್ ಹಾಗೂ ಮಸೀದಿ ಪರಿಸರದಲ್ಲಿ ಬಿ . ಎ ಸುಹೈಲ್ ರವರ ಬೈಕ್ ನ್ನು ಒಂದೇ ದಿನ ಕಳವು ಮಾಡಲಾಗಿತ್ತು.ಜನವರಿ 7 ರ ರಾತ್ರಿ ನಡುವೆ ಬೈಕ್ ಗಳನ್ನು ಕಳವು ಮಾಡಲಾಗಿತ್ತು
ಇಬ್ಬರ ದೂರಿನಂತೆ ಆದೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ನಿತಿನ್ ಹಾಗೂ ಮೂವರು ಆರೋಪಿಗಳು ಬೈಕ್ ಗಳನ್ನು ಕಳವು ಮಾಡಿದ್ದು, ಶರೀಫ್ ಮತ್ತು ಅಬ್ದುಲ್ ಲತೀಫ್ ಈ ಬೈಕ್ ಗಳನ್ನು ಖರೀದಿಸಿದ್ದರು. ಇಬ್ಬರು ಗುಜರಿ ಅಂಗಡಿ ಹೊಂದಿದ್ದಾರೆ. ಜಿಲ್ಲೆಯ ಇತರ ಕಡೆಗಳಲ್ಲಿ ನಡೆದ ಬೈಕ್ ಕಳವು ಪ್ರಕರಣ ಗಳಲ್ಲಿ ಇವರು ಶಾಮೀಲಾಗಿದ್ದಾರೆ ಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳವು ಗೈದ ಬೈಕ್ ಗಳನ್ನು ಗುಜರಿ ಅಂಗಡಿಗಳಿಗೆ ತಲಪಿಸಿ ಬಿಡಿ ಭಾಗಗಳನ್ನು ಮಾರಾಟ ಮಾಡುವ ಜಾಲ ಇವರದ್ದು ಎಂದು ಪೊಲೀಸರು ತಿಳಿಸಿದ್ದಾರೆ