ಕುಂಬಳೆ, ಜ 10 (DaijiworldNews/MS): ತಾಯಿಯ ಎದೆ ಹಾಲು ಗಂಟಲಲ್ಲಿ ಸಿಲುಕಿ ಮೂರು ತಿಂಗಳು ಪ್ರಾಯದ ಮಗು ಮೃತಪಟ್ಟ ಘಟನೆ ಮಂಗಳವಾರ ಬಂಬ್ರಾಣದಲ್ಲಿ ನಡೆದಿದೆ.
ಮೂಲತಃ ಈಶ್ವರ ಮಂಗಲ ನಿವಾಸಿ , ಪ್ರಸ್ತುತ ಬಂಬ್ರಾಣದಲ್ಲಿ ನೆಲೆಸಿದ್ದ ಅಬ್ದುಲ್ ಅಝೀಝ್-ಖದೀಜಾ ದಂಪತಿ ಪುತ್ರಿ , ಮೂರು ತಿಂಗಳ ಹಸುಳೆ ಅಯಿಶಾ ಮೆಹ್ರಾ ಮೃತಪಟ್ಟಿದೆ.
ಮಲಗಿಕೊಂಡು ಎದೆಹಾಲು ಕುಡಿಯುತ್ತಿದ್ದ ಮಗು ರಾತ್ರಿ ಎಷ್ಟು ಹೊತ್ತಾದರೂ ಎಚ್ಚರಗೊಳ್ಳದೆ ಇದ್ದಾ ಗ ಕುಂಬಳೆಯ ಖಾಸಗಿ ಆಸ್ಪ ತ್ರೆ ಗೆ ಕರೆದುಕೊಂಡುಹೋಗಿದ್ದು , ಅದಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಕುಂಬಳೆ ಪೊಲೀಸರು ಮಹಜರು ನಡೆಸಿದರು.