ಉಡುಪಿ, ಜ 9 ( DaijiworldNews/AK): ಉಡುಪಿ ನಗರ ಮತ್ತು ನಗರದ ಹೊರ ವಲಯದಲ್ಲಿ ಮಂಗಳವಾರ ಜನವರಿ 9 ರ ಸಂಜೆ ತೀವ್ರ ಗಾಳಿ ಮಳೆ ಆಗಿದ್ದು, ಜನಜೀವನ ಬಹುತೇಕ ಅಸ್ತವ್ಯಸ್ತ ಗೊಂಡಿತು.
ಮಂಗಳವಾರ ಸಂಜೆ ವೇಳೆಗೆ ಏಕಾಏಕಿ ಭೀಕರ ಗಾಳಿ, ಗುಡುಗು, ಮಿಂಚಿನ ಸಹಿತ ಮಳೆ ಬಂದಿದ್ದು ನಗರದ ಹಲವು ಬಹಮಹಡಿ ಕಟ್ಟಡಗಳ ಮೇಲೆ ಅಳವಡಿಸಿದ್ದ ಬ್ಯಾನರ್, ಕಟೌಟ್ ಗಳು ಗಾಳಿಯ ರಭಸಕ್ಕೆ ಹರಿದು ಹೋಗಿದೆ.
ನಗರದ ಮಾರುತಿ ವಿಥಿಕಾ ರಸ್ತೆಯ ಕಟ್ಟಡದ ಮೇಲ್ಬಾಗದಲ್ಲಿ ಹಾಕಲಾಗಿದ್ದ ಬೃಹತ್ ಬ್ಯಾನರ್ ವೊಂದು ಹರಿದು ಹೋಗಿ ಗಾಳಿಗೆ ನೇತಾಡಿ ಅಪಾಯಕಾರಿಯಾಗಿ ಪರಿಣಮಿಸಿದೆ. ಇನ್ನು ಗಾಳಿಯ ತೀವ್ರತೆ ಭೀಕರವಾಗಿತ್ತು ಎನ್ನಲಾಗಿದೆ.