ಉಡುಪಿ, ಜ 09 (DaijiworldNews/ AK):ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ವಿರೋಧಿಸಿ ಇಂದು ಬಿಜೆಪಿ ಕಾರ್ಯಕರ್ತರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಹಲವಾರು ಕಾರ್ಯಕರ್ತರು ಭಾಗವಹಿಸಿ ನಗರಸಭೆಯ ಆಡಳಿತಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷೆ ಸುಮಿತ್ರಾ,ನೀರಿನ ಬಿಲ್ ಏರಿಕೆ ಮಾಡಲು ಮುಂದಾಗಿದ್ದು, ನೀರಿನ ಮುಂಜಾಗ್ರತಾ ಕ್ರಮಗಳು ಆಗಬೇಕಾಗಿದೆ.ಡಿಸಿಯವರು ಖುದ್ದಾಗಿ ಸಭೆ ಕರೆಯಬೇಕು.ನಗರಸಭೆ ಸ್ವಚ್ಚತಾ 6 ಜನ ಹೆಲ್ತ್ ಇನ್ಸ್ ಪೆಕ್ಟೆರ್ ಬೇಕು.ನಮ್ಮ ಅವಧಿಯ ಕೊನೆಯಲ್ಳಿ ೨ ಹೆಲ್ತ್ ಇನ್ಸ್ ಪೆಕ್ಟರ್ ಇದ್ದರು.ನಗರಸಭೆ ಸದಸ್ಯರನ್ನು ಸಭೆ ಕರೆದು ಮಾಹಿತಿ ನೀಡಬೇಕು. ಪೌರ ಕಾರ್ಮಿಕರು ಬೇರೆ ಬೇರೆ ಕಡೆಗೆ ವರ್ಗಾವಣೆ ಆಗಿದ್ದಾರೆ.ಅಧ್ಯಕ್ಷ ನಿಯೋಜನಗೆ ನಗರಸಭೆ ಯಿಂದ ಮನವಿ ಕಳುಹಿಸಬೇಕು.ಡಿಸಿ ಗೆ ಮನವಿ ಕೂಡಾ ನೀಡಿದ್ದೇವು. ಆದರೆ ಇದಕ್ಕೆ ಯಾವುದೇ ಸ್ಪಂದಿಸಿಲ್ಲ ಎಂದು ಸುಮಿತ್ರಾ ನಾಯಕ್ ಕಿಡಿಕಾರಿದರು.
ಉಡುಪಿ ನಗರಸಭೆ ದೇಶದಲ್ಲಿ ಮಾದರಿ ನಗರಸಭೆ ಆಗಿತ್ತು.ಆದರೆ ಇವತ್ತು ನಗರಸಭೆಯ ವಿರುದ್ದ ಸದಸ್ಯರು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ.ಪೌರಾಯುಕ್ತರು ಕಾಂಗ್ರೆಸ್ ಏಜೆಂಟ್ ನಂತೆ ಕೆಲಸ ಮಾಡುತ್ತಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಬಗ್ಗೆ ಹೆಮ್ಮೆ ಇತ್ತು, ಅವರಿಂದ ಬಹಳಷ್ಟು ನಿರೀಕ್ಷೆ ಇತ್ತು. ಆದರೆ ಡಿಸಿ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಏಜೆಂಟ್ ಗಳು ಹೇಳಿದಂತೆ ಅವರು ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜನಸಾಮಾನ್ಯರರಿಗೆ ಅನುಕೂಲವಾಗುವಂತೆ ಆಡಳಿತ ನಡೆಸಿ ಕಳೆದ ಏಳು ತಿಂಗಳಲ್ಲಿ ಒಂದೇ ಒಂದು ಸಭೆ ನಡೆದಿದೆ. ಉಸ್ತುವಾರಿ ಸಚಿವರು ಕೇವಲ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಗೆ ಸೀಮಿತವಾಗಿದ್ದಾರೆ.ಡಿಸಿಯವರು ಅಧಿಕಾರಿಗಳಿಗೆ ಸೂಚನೆ ನೀಡಬೇಕು.ನಗರಸಭೆಯಲ್ಲಿ ಜನಪರವಾಗಿ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಬಹಳಷ್ಟು ಅಕ್ರಮ ಕಟ್ಟಡಗಳು ತಲೆ ಎತ್ತಿವೆ. ಇಂದ್ರಾಣಿ ಮಸೀದಿ ಗೋಡೆ ಅಕ್ರಮ ಕಟ್ಟಡ ಎಂದು ಹೇಳಿದ್ದರೂ ಕ್ರಮ ಕೈಗೊಂಡಿಲ್ಲ.ಇಂತಹವರು ಉಡುಪಿಯಲ್ಲಿ ಕೆಲಸ ಮಾಡಲು ನಾವು ಬಿಡುವುದಿಲ್ಲ.ಕಮಿಷನರ್ ಇಮೋಷನಲ್ ಬ್ಲ್ಯಾಕ್ ಮೇಲ್ ಮಾಡಿ ಆಡಳಿತ ನಡೆಸುತ್ತಿದ್ದಾರೆ.ನಮ್ಮ ಕಮಿಷನರ್ ಕ್ಯಾಶ್ ಲೆಸ್ ಭಷ್ಟಾಚಾರದ ಅಧಿಕಾರಿ.ನಗರದ ಬಹುತೇಕ ಕಾಮಗಾರಿಗಳು ಕಳಪೆ ಆಗಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾದ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ನಗರ ಸಭೆಯಲ್ಲಿ ದಲ್ಲಾಳಿಗಳ ಮೂಲಕ ಹೋದರೆ ಎರಡು ದಿನದಲ್ಲಿ ಕೆಲಸ ಆಗುತ್ತದೆ.ಟೆಂಡರ್ ದಾರರು ಕೂಡಾ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ.ಇಲ್ಲಿ ಆಗಿರುವ ಅಕ್ರಮಗಳ ವಿರುದ್ದ ಬಹಿರಂಗ ಚರ್ಚೆಗೆ ನಾನು ಸಿದ್ದ ಇದ್ದೇನೆ.ಉಸ್ತುವಾರಿ ಸಚಿವರು, ಪೌರಾಯುಕ್ತರು, ಕಾಂಗ್ರೆಸ್ ನಾಯಕರು ದಾಖಲೆಗಳನ್ನು ತೆಗೆದುಕೊಂಡು ಬರಲಿ.ಉಸ್ತುವಾರಿ ಸಚಿವರೆ ನೀವೇ ದಿನ, ಜಾಗ ನಿಗದಿ ಮಾಡಿ ಅಕ್ರಮಗಳ ಕುರಿತಾಗಿ ಚರ್ಚೆ ಮಾಡುವಇಲ್ಲದೆ ಹೋದಲ್ಲಿ ಉಡುಪಿ ಜನರು ತಮ್ಮನ್ನು ದಿಕ್ಕರಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದರು.