ಕಾಸರಗೋಡು, ಜ 08 (DaijiworldNews/HR): ಕೊಲೆ ಆರೋಪಿಯನ್ನು ಹುಡುಕಿಕೊಂಡು ಬಂದ ಪೊಲೀಸರಿಗೆ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಪಟ್ಟಂತೆ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಪೈವಳಿಕೆ ಯ ಮುಹಮ್ಮದ್ ಹರ್ಷಾದ್ (22) ಬಂಧಿತ ಆರೋಪಿ.
ಭಾನುವಾರ ಮಧ್ಯಾಹ್ನ ಮಂಜೇಶ್ವರ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ವಾಹನದ ಬಳಿಗೆ ಬಂದ ಈತ ಬೆದರಿಸಿ ಇಲ್ಲಿಂದ ತೆರಳುವಂತೆ ಬೆದರಿಸಿದ್ದನು ಎನ್ನಲಾಗಿದೆ.
ಈ ಬಗ್ಗೆ ಪೊಲೀಸ್ ಕಾನ್ಸ್ ಟೇಬಲ್ ಭವಿಷ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನು ಮುಹಮ್ಮದ್ ಹರ್ಷಾದ್ ವಿರುದ್ಧ ಕೊಲೆಯತ್ನ, ಪೋಕ್ಸೋ ಸೇರಿದಂತೆ ಐದರಷ್ಟು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.