ಕುಂದಾಪುರ, ಜ 8(DaijiworldNews/AA): ಮನೆಯ ಕಪಾಟಿನಲ್ಲಿಟ್ಟಿದ್ದ ಒಟ್ಟು 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ಕುಂಜೆ ಗ್ರಾಮದ ಕೆಂಚನೂರು ನಿವಾಸಿ ಶರತ್ ಆಚಾರ್ಯ ಅವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಮನೆಯ ಕಪಾಟಿನಲ್ಲಿದ್ದ ಒಟ್ಟು 1.60 ಲಕ್ಷ ರೂಪಾಯಿ ಮೌಲ್ಯದ 32 ಗ್ರಾಂ ತೂಕದ ಚಿನ್ನದ ಸರ ಹಾಗೂ 20 ಸಾವಿರ ರೂ. ಮೌಲ್ಯದ ನಾಲ್ಕೂವರೆ ಪವನಿನ ಉಂಗುರ ಕಳುವಾಗಿದೆ. ಜನವರಿ 7ರಂದು ಕಾರ್ಯಕ್ರಮವೊಂದಕ್ಕೆ ತೆರಳುವ ವೇಳೆ ಕಪಾಟಿನಲ್ಲಿದ್ದ ಚಿನ್ನಕ್ಕಾಗಿ ನೋಡಿದಾಗ ಕಳುವಾಗಿರುವುದು ಬೆಳಕಿಗೆ ಬಂದಿದೆ.
ಇನ್ನು ಶರತ್ ಅವರೊಂದಿಗೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಹೋದ್ಯೋಗಿಯೂ ಜನವರಿ 5ರಿಂದ ಕೆಲಸಕ್ಕೆ ಬಾರದೇ ನಾಪತ್ತೆಯಾಗಿದ್ದಾನೆ. ಫೋನ್ ಮಾಡಿದರೂ ಸ್ವಿಚ್ ಆಫ್ ಬರುತ್ತಿದೆ. ಇದರಿಂದ ಆತನ ಮೇಲೆ ಅನುಮಾನವಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.