ಉಡುಪಿ, ಜ 05 (DaijiworldNews/HR): ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ಕನರ್ಪಾಡಿ ಜಯದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರಿಂದ ಹೊರೆಕಾಣಿಕೆ ಸಮರ್ಪಿಸುವ ಬಗ್ಗೆ ಸಮಾಲೋಚನಾ ಸಭೆಯನ್ನು ನಡೆಸಲಾಯಿತು.
ಪರ್ಯಾಯ ಹೊರೆಕಾಣಿಕೆಯ ಸಂಚಾಲಕರಾದ ಸುಪ್ರಸಾದ ಶೆಟ್ಟಿಯವರು ಮಾತನಾಡಿ ಹೊರೆಕಾಣಿಕೆಯ ವಿವರಗಳನ್ನು ತಿಳಿಸಿ ಈ ಬಾರಿಯ ವಿಶ್ವ ಪರ್ಯಾಯಕ್ಕೆ ಲಕ್ಷಾಂತರ ಭಕ್ತರು ಉಡುಪಿಗೆ ಆಗಮಿಸಲಿದ್ದು ಅನ್ನದಾನಕ್ಕಾಗಿ ಬ್ರಹತ್ ಹೊರೆಕಾಣಿಕೆ ವ್ಯವಸ್ಥೆ ಆಯೋಜಿಸಬೇಕೆಂದು ವಿನಂತಿಸಿದರು.
ಗಂಗಾಧರ್ ರಾವ್ ರವರು ಮಾತನಾಡಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ ಹೊರೆಕಾಣಿಕೆಯ ಮೆರವಣಿಗೆಯು ವ್ಯವಸ್ಥಿತೆಯಿಂದ ಸಾಗಬೇಕೆಂದು ವಿನಂತಿಸಿದರು.
ಇನ್ನು ಜಯಪ್ರಕಾಶ ಕೆದ್ಲಾಯರು ಊರ ಸುತ್ತಮುತ್ತಲಿನ ಜನರ ಸಹಕಾರ ಕೋರಿದರು. ದೇವಸ್ಥಾನದ ಮುಖ್ಯಸ್ಥರಾದ ರಾಘವೇಂದ್ರ ಭಟ್ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿಯ ರವೀಂದ್ರ ಆಚಾರ್ಯ, ರಘುಪತಿ ರಾವ್ ಹಾಗೂ ಊರ ಮುಖ್ಯಸ್ಥರು ಹಾಜರಿದ್ದರು.