ಉಳ್ಳಾಲ, ಜ 04 (DaijiworldNews/MS): ರಾಷ್ಟ್ರೀಯ ಹೆದ್ದಾರಿ 66 ರ ಕೋಟೆಕಾರು ಬೀರಿ ಸಮೀಪ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ಮೊಣಕಾಲುದ್ದಕ್ಕೆ ನೀರು ರಸ್ತೆಯಲ್ಲೇ ನಿಂತು ವಾಹನ ಸವಾರರಿಗೆ ಅಪಾಯವನ್ನು ಆಹ್ವಾನಿಸಿದೆ.
ಇಂದು ಬೆಳಗ್ಗಿನಿಂದಲೇ ನೀರು ನಿಂತ ಪರಿಣಾಮ ಹಲವು ದ್ವಿಚಕ್ರ ವಾಹನ ಸವಾರರು ಅಪಾಯದಿಂದಲೇ ಸವಾರಿ ಮಾಡುವಂತಾಯಿತು. ತಲಪಾಡಿ ಕಡೆಯಿಂದ ತೊಕ್ಕೊಟ್ಟು ಕಡೆಯತ್ತ ಹೋಗುವ ದಿಕ್ಕಿನಲ್ಲಿ ನೀರು ನಿಂತಿದ್ದು, ಸಮರ್ಪಕ ಚರಂಡಿ ಇಲ್ಲದ ಪರಿಣಾಮ ರಸ್ತೆಯಲ್ಲೇ ನೀರು ನಿಲ್ಲುವಂತಾಗಿದೆ. ರಾ. ಹೆ ನಿರ್ವಹಣೆ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆ ತಕ್ಷಣ ಕ್ರಮಕೈಗೊಳ್ಳಬೇಕು ಅನ್ನುವ ಆಗ್ರಹವನ್ನು ಸಾರ್ವಜನಿಕರು ಮಾಡಿದ್ದಾರೆ.