ಉಡುಪಿ, ಜ 04 (DaijiworldNews/MS): ತೆಂಕಪೇಟೆಯ ಮುಖ್ಯ ರಸ್ತೆ ಹಾಗೂ ಹಳೆ ಅಂಚೆ ಕಛೇರಿ ರಸ್ತೆಗಳಲ್ಲಿ ತೇಪೆ ಹಾಕುವ ಕಾಮಗಾರಿ ನಡೆಯುತ್ತಿದ್ದು, ಸಾರ್ವಜನಿಕರು ಸಂಪೂರ್ಣ ಕಳಪೆ ಮಟ್ಟದ ಕಾಮಗಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರಿಂದ, ಸ್ಥಳಕ್ಕೆ ಬಂದ ನಗರಸಭೆಯ ಪೌರಾಯುಕ್ತರು, ಕಾಮಗಾರಿ ಪರೀಶಿಸಿದರು. ಕಳಪೆ ಮಟ್ಟದ ತೇಪೆ ಹಾಕುವ ಕಾಮಗಾರಿಯೆಂದು ಧೃಡಿಕರಿಸಿದ ಪೌರಾಯುಕ್ತರು, ಮರು ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಆದೇಶವಿತ್ತರು.
ಸಾರ್ವಜನಿಕ ರಸ್ತೆಗಳ ಕಾಮಗಾರಿಗಳು ಸಾರ್ವಜನಿಕರ ಕರದ ಹಣದಿಂದಲೇ ನಡೆಯುತ್ತಿರುವುದು. ಕಾಮಗಾರಿಯ ಉಸ್ತುವಾರಿ ಹೊತ್ತವರು ದನದಾಹದಿಂದ ಸಾರ್ವಜನಿಕರ ಹಣವನ್ನು ನುಂಗುವುದು ಸರಿಯಲ್ಲ. ಮೇಲಾಧಿಕಾರಿಗಳು ಕಾಮಗಾರಿಯ ಸ್ಥಳದಲ್ಲಿ ಗಸ್ತು ಇರಬೇಕು, ಕಾಮಗಾರಿಯ ಗುಣಮಟ್ಟದ ಪರೀಶಿಲನೆ ನಡೆಸುತ್ತಿರಬೇಕು. ಆವಾಗ ಮಾತ್ರ ಸಾರ್ವಜನಿಕರ ಹಣವನ್ನು ಪೋಲಾಗುವುದನ್ನು ತಪ್ಪಿಸಬಹುದು. ಉತ್ತಮ ಗುಣಮಟ್ಟದ ಬಾಳಿಕೆಯ ರಸ್ತೆಗಳ ನಿರ್ಮಾಣ ಸಾಧ್ಯವಿದೆ ಎಂದು ಕಳಪೆ ಮಟ್ಟದ ಕಾಮಗಾರಿಯ ಕಂಡು ಮಾಜಿ ನಗರ ಸಭೆಯ ಸದಸ್ಯ ನಿತ್ಯಾನಂದ ಒಳಕಾಡುವರು ಹೇಳಿದರು.