ಕಾಸರಗೋಡು, ಜ 2 (DaijiworldNews/SK): ಕಾಸರಗೋಡು ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು, ಕಾಸರಗೋಡು ಸಹಿತ ಕೇರಳದ 30 ರೈಲು ನಿಲ್ದಾಣಗಳನ್ನು ಕೇಂದ್ರ ಸರಕಾರದ ಹೊಸ ಅಮೃತ್ ಭಾರತ್ ಯೋಜನೆ ಅಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಇದೀಗ ಕಾಸರಗೋಡಿನ ಪ್ರತಿ ನಿಲ್ದಾಣವನ್ನು 15 ಕೋಟಿ ರೂ. ವ್ಯಯಿಸಿ ಅಭಿವೃದ್ಧಿಯತ್ತ ಕೊಂಡ್ಯೊಯಲು ಯೋಜನೆಯನ್ನು ರೂಪಿಸಲಾಗಿದೆ. ಕೇರಳ ಸಹಿತ ದೇಶದಲ್ಲಿ 1, 309 ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಲ್ಲಿ ಕೇಂದ್ರ ರೈಲ್ವೇ ಇಲಾಖೆ ಸೇರ್ಪಡೆಮಾಡಲಾಗಿತ್ತು.
ಈ ನಿಟ್ಟಿನಲ್ಲಿ 509 ನಿಲ್ದಾಣಗಳ ನವೀಕರಣ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಹಳೆ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವುದು, ಎಕ್ಸ್ ಲೇಟರ್, ಸಿಸಿ ಟಿವಿ ಅಳವಡಿಕೆ, ಮೇಲ್ಸೇತುವೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರೊಂದಿಗೆ ಪ್ರಯಾಣಿಕರ ಸಂಚಾರಕ್ಕೆ ಅನುಕೂಲತೆಯನ್ನು ಹೆಚ್ಚಿಸಲು, ನಿಲ್ದಾಣದ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್, ಪ್ಲಾಟ್ ಫಾರಂ, ವಿಶ್ರಾಂತಿ ಕೊಠಟಿ, ವೈಫೈ ಸೌಕರ್ಯಗಳನ್ನು ಕಲ್ಲಿಸಲಾಗುತ್ತದೆ ಎಂದು ತಿಳಿದು ಬಂದಿದೆ.