ಮಂಗಳೂರು, ಜ 01 (DaijiworldNews/HR): ಎಕ್ಸ್ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ 38ನೇ ಎಕ್ಸ್ಪರ್ಟ್ ದಿನಾಚರಣೆ ಹಿನ್ನೆಲೆಯಲ್ಲಿ ವಳಚ್ಚಿಲ್ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ಕ್ಯಾಂಪಸ್ನಲ್ಲಿ ಆಯೋಜಿಸಿದ ಟೈಂ ಸ್ಕ್ವೇ ರ್ ಮ್ಯೂ ಸಿಕ್ ಫೆಸ್ಟಿವಲ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ತಾಳವಾದ್ಯದಲ್ಲಿ ವಿಶ್ವಖ್ಯಾ ತಿ ಪಡೆದಿರುವ ಸಂಗೀತ ದಿಗ್ಗಜ ಆನೂರು ಅನಂತಕೃಷ್ಣ ಶರ್ಮಾ ಅವರ ನೇತೃತ್ವದ ತಂಡದ ʻಲಯಲಾವಣ್ಯʼ ಸಂಗೀತ ಹಬ್ಬದ ವಾತಾವರಣ ಸೃಷ್ಠಿಸಿತು.
ಕರ್ನಾಟಕ ಕಲಾ ಶ್ರೀ, ಗಾನ ಕಲಾ ಶ್ರೀ, ಲಯಕಲಾ ಪ್ರತಿಭಾ ಮಣಿ, ನಾದಲಯ ಗುರು ಶ್ರೇಷ್ಠ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ನಡೆದ ʻಲಯಲಾ ವಣ್ಯʼ ಸಂಗೀತ ಕಾರ್ಯಕ್ರಮ ಜನಮನ ರಂಜಿಸಿತು. " ಶಿವು ಸರ್ " ಎಂದೇ ಖ್ಯಾತರಾದ ಆನೂರು ಅನಂತಕೃಷ್ಣ ಶರ್ಮಾ ಅವರು ಮೃದಂಗದಲ್ಲಿ ತಮ್ಮ ವಿದ್ವತ್ತನ್ನು ಪ್ರ ಕಟಿಸಿದರು.
ಕರಟವಾದ್ಯ ಸಹಿತ 200ಕ್ಕೂ ಅಧಿಕ ಸಂಗೀತೋ ಪಕರಣಗಳಲ್ಲಿ ಕೈಚಳಕ ಹೊಂದಿರುವ ಅವರು ತಮ್ಮ ಸಂಗೀತ ಮಾಂತ್ರಿಕ ವಿದ್ಯೆಯನ್ನು ವೈವಿಧ್ಯ ತಾಳವಾದ್ಯಗಳ ಮೂಲಕ ಅಕ್ಷರಶಃ ನುಡಿಸಿದರು. ಕೊಳಲಿನಲ್ಲಿ ವಿದ್ವಾನ್ ಅಮಿತ್ ನಾಡಿಗ್ ಮತ್ತು ವಯೊಲಿನ್ನಲ್ಲಿ ವಿದ್ವಾನ್ ಕೆ.ಜೆ.ದಿಲೀ ಪ್ ತಮ್ಮ ಸಂಗೀತ ಪ್ರತಿಭೆಯನ್ನು ಮೆರೆದು ಕೇಳುಗರಲ್ಲಿ ಸಂಗೀತದ ಹುಚ್ಚೆಬ್ಬಿಸಿದರು.
ನವರಾಗಗಳ ವರ್ಣದೊಂದಿಗೆ ನಾಂದಿ ಹಾಡಿದ ಲಯಲಾವಣ್ಯ ಸಂಗೀತ ಹಬ್ಬವು ದಕ್ಷಿಣ-ಉತ್ತರ ಭಾರತೀಯ, ಜಾನಪದ, ಪಾಶ್ಚಾತ್ಯ -ಲ್ಯಾಟಿನ್ ತಾಳವಾದ್ಯಗಳ ಮೇಳ ಶ್ರುತಿ ಶ್ರಾವ್ಯವಾಗಿ ಮೂಡಿಬಂತು. ಅನಂತರ ಹಂಸಧ್ವನಿ ರಾಗದ ವಾತಾಪಿ ಗಣಪತಿಂ ಭಜೇ ಹಂ ... ಕೃತಿ ಸಂಗೀತದ ಗುಂಗಿನಲ್ಲಿ ಮಿಂದೆಬ್ಬಿಸಿತು. ಕೊಳಲ ನಾದ ವೈವಿಧ್ಯದೊಂದಿಗೆ ವಯೋ ಲಿನ್ ಲಯವಿನ್ಯಾ ಸತೇಲಿಬಂದು, ಸಂಗೀತ ಲೋಕದ ದಿವ್ಯಾನುಭವಕ್ಕೆ ಕೇಳು ಗರು ಸಾಕ್ಷಿಯಾದರು . ಇದರ ಜೊತೆ ತಬಲಾ ಮೇಳೈಸಿದಾಗ ಚಪ್ಪಾಳೆಯ ಸಾಥ್ ಕೇಳಿಬಂತು.
ಇನ್ನು ಡ್ರಮ್ಸ್ನೊಂದಿಗೆ ಇತರ ತಾಳವಾದ್ಯಗಳ ಮೂಲಕ ಕದನ ಕುತೂಹಲರಾಗ ತೇಲಿಬಂದಾಗ ಸಂ ಗೀ ತಪ್ರಿಯರ ಹೃದಯ ಹಾಡಿತು . ಕೊಳಲು -ವಯೋಲಿನ್ ತಾಳ-ಮಳ ಕದನ ಕತೂಹಲವನ್ನೇ ಮೂಡಿಸಿತು. ಹೇಮಾವತಿ ರಾಗನಾದ ಲೋಕವನ್ನೇ ಸೃಷ್ಠಿಸಿತು. ಒಂದಾನೊಂದು ಕಾಲದಲ್ಲಿ..., ಜೊತೆಯಲಿ ಜೊತೆ ಜೊತೆಯಲಿ..., ಕಾಂತಾರ... ಮೊದಲಾದ ಸಿನಿಮಾ ಹಾಡುಗಳು ತಾಳವಾದ್ಯಗಳ ಮೂಲಕ ನವಿರಾಗಿ ರಂಜಿಸಿತು. ತನಿ ಆವರ್ತನದಲ್ಲಿ ಮಿಂಚಿದ ಸಂಗೀತದ ರಂಗು ಸಂಜೆಯ ತಂಗಾಳಿಯಲ್ಲಿ ಬೆಚ್ಚಗಿನ ಅನುಭವ ನೀಡಿತು.
ಶಿಶುನಾಳ ಷರೀಫರ ತರವಲ್ಲ ತಗಿ ನಿನ್ನ ತಂಬೂರಿ.. ಮತ್ತು ಪು ರಂದರ ದಾಸರ ಭಾಗ್ಯದ ಲಕ್ಷ್ಮೀ ಬಾ ರಮ್ಮ ... ಹಾಡುಗಳ ಲಯಲಾವಣ್ಯದೊಂದಿಗೆ ಸಂಗೀತದ ಹಬ್ಬಕ್ಕೆ ಮಂಗಳಕರ ತೆರೆ ಸರಿಯಿತು. ವಿದ್ವಾನ್ ಬಿ.ಆರ್.ಸೋಮಶೇಖರ್ ಜೋಯಿಸ್(ಕೊನ್ನಕ್ಕೋಲ್), ವಿದ್ವಾನ್ ಪ್ರಜ್ವಲ್ ಭಾರದ್ವಾಜ್(ಖಂಜರಿ), ವಿದ್ವಾನ್ ಎಸ್.ಪಿ. ನಾಗೇಂದ್ರ ಪ್ರಸಾದ್(ಮೃದಂಗ ಮತ್ತು ಖೋಲ್), ವಿದ್ವಾನ್ ಚಿದಾನಂದ(ಮೋರ್ಚಿಂಗ್), ವಿದ್ವಾನ್ ಸುನಾದ್ ಆನೂರು (ಪರ್ಕಶನ್), ವಿದ್ವಾನ್ ಅಕ್ಷರ ರಘು (ಡ್ರಮ್ಸ್), ವಿದ್ವಾನ್ ಮಧುಸೋಹನ್(ಧೋಲಕ್ ಮತ್ತು ತಮಟೆ), ವಿದ್ವಾನ್ ಪ್ರಬೋಧ್ ಶ್ಯಾಮ್ ಆನೂರು (ಪಖಾವಾಜ್ ಮತ್ತು ಧೋಲಕ್), ವಿದ್ವಾನ್ ಜಗದೀಶ್ ಕುರ್ತಕೋಟಿ(ತಬ್ಲಾ )ಸಹಕರಿಸಿದರು.
ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು ʻಟೈಂಸ್ಕ್ವೇರ್ ಮ್ಯೂಸಿಕ್ ಫೆಸ್ಟಿವಲ್ʻ ಕಾ ರ್ಯಕ್ರಮವನ್ನು ಹಾಡುವ ಮೂಲಕ ಉದ್ಘಾಟಿಸಿವರು. ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್, ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್, ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಆರ್ಕಿಟೆಕ್ಟ್ ದೀಪಿಕಾ ಎ. ನಾಯಕ್, ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ಕರಿಪ್ಪಾಲ್, ಕಾರ್ಯಕ್ರಮ ನಿರ್ದೇಶಕಿ ಧೃತಿ ವಿ.ಹೆಗ್ಡೆ ಉಪಸ್ಥಿತರಿದ್ದರು. ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್ ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ರಕ್ಷಿತ್ ಎಂ. ಆರ್. ವಂದಿಸಿದರು. ವಿದ್ಯಾರ್ಥಿಗಳಾದ ಕಾವ್ಯಾ ಸಿ.ಎಲ್ ಮತ್ತು ಎಂ .ಮೃಣಾಲಿನಿ ಕಾರ್ಯಕ್ರಮ ನಿರೂಪಿಸಿದರು.