ಉಳ್ಳಾಲ ,ಏ20(Daijiworld News/AZM):ಕಸಾಯಿ ಮಾಡಲೆಂದು ಕಳವು ನಡೆಸಲಾಗಿದೆ ಎನ್ನಲಾದ 10 ಜಾನುವಾರುಗಳು ಹಾಗೂ ರಿಕ್ಷಾ ಸಹಿತ 20 ಕೆ.ಜಿ ಮಾಂಸವನ್ನು ಉಳ್ಳಾಲ ಪೊಲೀಸರು ಇಂದು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಬ್ರಾಹಿಂ ಕೋಡಿ ಪರಾರಿಯಾಗಿದ್ದಾನೆ. ಉಳ್ಳಾಲದ ತೋಟದ ಬಯಲು ಪ್ರದೇಶದಲ್ಲಿ ಕಳವು ನಡೆಸಲಾಗಿದೆ ಎನ್ನಲಾದ ದನ,ಕರುಗಳು ಸೇರಿದಂತೆ 10 ಜಾನುವಾರುಗಳು, ಹಾಗೂ ರಿಕ್ಷಾ ಸೇರಿದಂತೆ ೨೦ ಕೆ.ಜಿ. ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿರುದ್ಧ ಈ ಹಿಂದೆಯೂ ಜಾನುವಾರು ಕಳವು, ಮಾಂಸ ಸಾಗಾಟ ಪ್ರಕರಣಗಳಿವೆ ಎನ್ನಲಾಗಿದೆ. ಜಾನುವಾರುಗಳನ್ನು ಪಜೀರು ಗೋವನಿತಾಶ್ರಮಕ್ಕೆ ಹಸ್ತಾಂತರಿಸಲಾಗಿದೆ.