ಮಂಗಳೂರು, ಜ 01 (DaijiworldNews/HR): ಡಿಸೆಂಬರ್ 30ರಂದು ಕ್ಯಾಪ್ಟನ್ ಬೃಜೇಶ್ ಚೌಟ ಅವರ ಸಾರಥ್ಯದಲ್ಲಿ ಮಂಗಳೂರು ಕಂಬಳ ಸಮಿತಿ ವತಿಯಿಂದ 7ನೇ ವರ್ಷದ ಹೊನಲು ಬೆಳಕಿನ ಮಂಗಳೂರು ಕಂಬಳ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಅದ್ದೂರಿಯಾಗಿ ನಡೆಯಿತು.
ಈ ವೇಳೆ ಮಾತನಾಡಿದ ಕ್ಯಾಪ್ಟನ್ ಬೃಜೇಶ್ ಚೌಟ ಅವರು, ಕಳೆದ 6 ವರ್ಷದಿಂದ ಮಂಗಳೂರು ಕಂಬಳವನ್ನು ಆಯೋಜಿಸುತ್ತಾ ಬರುತ್ತಿದ್ದೇವೆ. ಕಂಬಳವನ್ನು ಉಳಿಸಲು ಮಂಗಳೂರಿನಲ್ಲಿ ನಡೆದ ಹೋರಾಟವೇ ಈ ಕಂಬಳವನ್ನು ಆಯೋಜಿಸಲು ನಮಗೆ ಸ್ಫೂರ್ತಿ. ಆ ಹೋರಾಟದ ಫಲಶೃತಿಯಾಗಿ ಕಂಬಳ ಪುನರಾರಂಭಗೊಂಡಿದೆ. ನಗರದಲ್ಲಿ ಕಂಬಳವೊಂದನ್ನು ಆಯೋಜಿಸಬೇಕು ಎಂಬ ಉದ್ದೇಶದಿಂದ ಗೋಲ್ಡ್ ಫಿಂಚ್ ಸಿಟಿಯಲ್ಲಿ ಕಂಬಳವನ್ನು ಪ್ರಾರಂಭಿಸಿದ್ದೇವೆ ಎಂದರು.
ಇನ್ನು ಕಂಬಳದ ಸಭಾ ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಂಬಳದ ಗೌರವಾಧ್ಯಕ್ಷ, ಎಂಆರ್ಜಿ ಗ್ರೂಪ್ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಎಸ್.ಎಲ್.ಭೋಜೇಗೌಡ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ಕಂಬಳದಲ್ಲಿ ಈ ಬಾರಿ 170 ಜತೆ ಕೋಣಗಳು ಭಾಗವಹಿಸಿವೆ. ಕಲರ್ ಕೂಟ ಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 08 ಜೊತೆ
ಅಡ್ಡಹಲಗೆ: 04 ಜೊತೆ
ಹಗ್ಗ ಹಿರಿಯ: 22 ಜೊತೆ
ನೇಗಿಲು ಹಿರಿಯ: 29 ಜೊತೆ
ಹಗ್ಗ ಕಿರಿಯ: 26 ಜೊತೆ
ನೇಗಿಲು ಕಿರಿಯ: 81 ಜೊತೆ
ಒಟ್ಟು ಕೋಣಗಳ ಸಂಖ್ಯೆ: 170 ಜೊತೆ
ಕನೆಹಲಗೆ:
( ನೀರು ನೋಡಿ ಬಹುಮಾನ )
ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
ದ್ವಿತೀಯ: ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ಅಡ್ಡ ಹಲಗೆ:
ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
ದ್ವಿತೀಯ: ಮಂಗಳೂರು ಕಂಬಳಾಭಿಮಾನಿ ವಕೀಲ ವೃಂದ
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
ಹಗ್ಗ ಹಿರಿಯ:
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಎ"
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಸಿ"
ಓಡಿಸಿದವರು: ಕಾವೂರು ದೋಟ ಸುದರ್ಶನ್
ಹಗ್ಗ ಕಿರಿಯ:
ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗಿಶ್ ಪೂಜಾರಿ
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್
ದ್ವಿತೀಯ: ಸಾಲಿಗ್ರಾಮ ಕಾರ್ಕಡ ಪುಟ್ಟು ಹೊಳ್ಳರಮನೆ ನಟರಾಜ್ ಹೊಳ್ಳ
ಓಡಿಸಿದವರು: ಪಣಪೀಲ ಪ್ರವೀಣ್ ಕೋಟ್ಯಾನ್
ನೇಗಿಲು ಹಿರಿಯ:
ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ "ಬಿ"
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ದ್ವಿತೀಯ: ಹೊಸ್ಮಾರ್ ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ "ಎ"
ಓಡಿಸಿದವರು: ಬೈಂದೂರು ಮಂಜುನಾಥ ಗೌಡ
ನೇಗಿಲು ಕಿರಿಯ:
ಪ್ರಥಮ: ಕಟೀಲು ಕಿನ್ನಿಗೋಳಿ ಪ್ರಖ್ಯಾತ್ ಪ್ರಣೀತ್ ಶೆಟ್ಟಿ
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್
ದ್ವಿತೀಯ: ಮೂಡುಬೆಳ್ಳೆ ಜವನೆರ್
ಓಡಿಸಿದವರು: ಹೀರೆಬೆಟ್ಟು ಪ್ರದೀಪ್