ಗುಜರಾತ್ ಅಸೆಂಬ್ಲಿ ಚುನಾವಣಾ ಜಾಹೀರಾತಿನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಅವಮಾನಿಸುವ ರೀತಿಯಲ್ಲಿ "ಪಪ್ಪು" ಪದವನ್ನು ಬಳಸಿದ್ದ ಬಿಜೆಪಿಗೆ ಚುನಾವಣಾ ಅಯೋಗವು ಪಪ್ಪು ಪದಕ್ಕೆ ಕತ್ತರಿ ಹಾಕುವಂತೆ ಸೂಚನೆ ನೀಡಿದೆ.
ಆದರೆ ಈಗ ಇದೇ ವಿಷಯ ಟ್ವಿಟ್ಟರ್ ನಲ್ಲಿ #PappuCensored ಹ್ಯಾಷ್ ಟ್ಯಾಗ್ ನಲ್ಲಿ ಭಾರೀ ತಮಾಷೆಗೆ ಕಾರಣವಾಗಿದೆ." ಓಹೋ, ಈಗ ಚುನಾವಣಾ ಆಯೋಗವೇ ಯಾರು ಪಪ್ಪು ಅನ್ನೋದನ್ನು ಖಾತ್ರಿಪಡಿಸಿದೆ. ಇನ್ನು ಸರ್ಟಿಫಿಕೇಟ್ನ ಅಗತ್ಯವಿಲ್ಲ" ಎಂದು ಗೌರವ್ ಪರಾಶರ್ ಎಂಬುವರು ಪ್ರತಿಕ್ರಿಯಿಸಿದ್ದರೆ, ಸೋಮೆನಾಥ್, "ಚುನಾವಣಾ ಆಯೋಗವೇ ಅಧಿಕೃತವಾಗಿ ಪಪ್ಪು ಎಂದು ಘೋಷಿಸಿದೆ" ಎಂದು ರಾಹುಲ್ ಗಾಂಧಿಯ ಕಾಲೆಳೆದಿದ್ದಾರೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅವಮಾನ ಮಾಡುವುದಕ್ಕೆ ಇಂಥ ಪದ ಬಳಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಚುನಾವಣೆ ಆಯೋಗದಿಂದ ಆ ಪದಕ್ಕೆ ಕತ್ತರಿ ಹಾಕಿದ್ದರೂ ಗೇಲಿ, ವ್ಯಂಗ್ಯ ಕೇಳಿಬರುತ್ತಿದೆ.