ಸುಳ್ಯ, ಡಿ 30 (DaijiworldNews/AK): ಆಲೆಟ್ಟಿ ಗ್ರಾಮದ ಗುಂಡ್ಯ ನಿವಾಸಿ ದಿ.ಕೊರಗಪ್ಪ ಎಂಬವರ ಪುತ್ರ ರಾಜೇಶ್ ಗುಂಡ್ಯ( 29) ರವರು ಇಂದು ಬೆಳಗ್ಗೆ ತನ್ನ ಕೋಣೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
https://daijiworld.ap-south-1.linodeobjects.com/Linode/img_tv247/30-12-2023AKSULLIA.jpg
ಕಳೆದ ಡಿ.21 ರಂದು ಕಾಣಿಯೂರಿನ ಚೈತ್ರಾ ಎಂಬಾಕೆಯನ್ನು ವಿವಾಹವಾಗಿದ್ದು, ಅತಿಥಿ ಸತ್ಕಾರ ಕಾರ್ಯಕ್ರಮವು ಡಿ.24 ರಂದು ಸುಳ್ಯದ ಪುರಭವನದಲ್ಲಿ ಏರ್ಪಡಿಸಿದ್ದರು.
ಬಳಿಕ ತನ್ನ ಪತ್ನಿಯೊಂದಿಗೆ ಗುಂಡ್ಯ ಮನೆಯಲ್ಲಿದ್ದರು.ಇಂದು ಬೆಳಗ್ಗೆ ಮನೆಯವರು ಎದ್ದು ಹೋದ ಬಳಿಕ ಅಲ್ಲೇ ಇದ್ದ ಸೀರೆಯನ್ನು ಬಳಸಿ ಈ ಕೃತ್ಯವೆಸಗಿಕೊಂಡಿರುವುದಾಗಿ ತಿಳಿದು ಬಂದಿದೆ.
ಮೃತರು ತಾಯಿ ಸುಶೀಲಾ, ಪತ್ನಿ ಚೈತ್ರಾ ಹಾಗೂ ಕುಟುಂಬಸ್ಥರನ್ನು ಬಂಧು ಮಿತ್ರರನ್ನು ಅಗಲಿದ್ದಾರೆ