ಬಜ್ಪೆ, ಡಿ 29 (DaijiworldNews/MS): ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ್ದ ಆರೋಪದಲ್ಲಿ ಅಂಗಡಿಯ ಮಾಲೀಕನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಜಯಾನಂದ ಕುಲಾಲ್ ಎಂದು ಗುರುತಿಸಲಾಗಿದೆ.
ಡಿ.27ರಂದು ಮೊಗರು ಗ್ರಾಮದ ತಾರೆಮಾರ್ ಎಂಬಲ್ಲಿರುವ ತನ್ನ ಗೂಡಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಡಿ.27ರ ಸಂಜೆ 4.45ರ ಸುಮಾರಿಗೆ ಬಜ್ಪೆ ಪೊಲೀಸರು ರೌಂಡ್ಸ್ ನಲ್ಲಿದ್ದವೇಳೆ ಆರೋಪಿಯ ಅಂಗಡಿ ಮುಂಭಾಗದಲ್ಲಿದ್ದ ಗ್ರಾಹಕರು ಪೊಲೀಸ್ ವಾಹನ ಕಂಡು ಓಡಿದ್ದಾರೆ. ಇದನ್ನು ಕಂಡು ಅನುಮಾನಗೊಂಡ ಪೊಲೀಸರು ಗೂಡಂಗಡಿಯನ್ನು ತಪಾಸಣೆಗೆ ಒಳಪಡಿಸಿದಾಗ ವಿವಿಧ ಬ್ರ್ಯಾಂಡ್ ಗಳ 90ಎಂಎಲ್ ನ ಒಟ್ಟು 18 ಟೆಟ್ರಾ ಪ್ಯಾಕ್ ಮದ್ಯ ದೊರಕಿದ್ದು, ಪರವಾಣಿಗೆ ಇಲ್ಲದೇ ಮಾರಾಟ ಮಾಡುತ್ತಿರುವುದು ದೃಢಪಟ್ಟಿದೆ.