ವಿಟ್ಲ, ಡಿ 29 (DaijiworldNews/MS): ಗುಡ್ಡ ಜರಿದು ಕಾರ್ಮಿಕರು ಮಣ್ಣಿನ ಅಡಿ ಸಿಲುಕಿದ ಘಟನೆ ಸೂರಿಕುಮೇರು ಸಮೀಪದ ಕಾಯರಡ್ಕ ಎಂಬಲ್ಲಿ ಡಿ. 29 ರ ಶುಕ್ರವಾರ ನಡೆದಿದೆ.
ಜೆಸಿಂತಾ ಮಾರ್ಟಿಸ್ ಎಂಬವರ ಮನೆಯ ಕಾಂಪೌಂಡ್ ನ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಮೇಲಿನಗುಡ್ಡ ಜರಿದು ಬಿದ್ದಿದೆ. ಗುಡ್ಡ ಜರಿದು ಮಣ್ಣಿನೊಳಗೆ ಸಿಲುಕಿಕೊಂಡಿದ್ದ ಇಬ್ಬರು ಕಾರ್ಮಿಕರಾದ ರಾಜೇಶ್ ನಾಯ್ಕ್ ಬಾಯಿಲ, ಉಮೇಶ್ ನಾಯ್ಕ್ ನೆಲ್ಲಿ ರವರು ಮಣ್ಣಿನ ಅಡಿಯಲ್ಲಿ ಸಿಲುಕಿಹಾಕಿಕೊಂಡಿದ್ದರು.
ಕಾಂಪೌಂಡ್ ನಿರ್ಮಾಣಕ್ಕೆ ಮಣ್ಣು ಅಗೆದು ಪಾಯ ಮಾಡುತ್ತಿದ್ದ ವೇಳೆ ಗುಡ್ಡ ಜರಿದು ಘಟನೆ ಸಂಭವಿಸಿದೆ. ತಕ್ಷಣ ಮಣ್ಣಿನ ಅಡಿಯಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಣೆ ಮಾಡಿದ ಸ್ಥಳೀಯರು, ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಹೆಚ್ ಈ ಹಾಗೂ ಕಂದಾಯ ಅಧಿಕಾರಿ ವಿಜಯ್ ರವರು ಸ್ಥಳಕ್ಕೆ ಬೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಸೋಷಿಯಲ್ ಇಕ್ವ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.