ಕಾಸರಗೋಡು, ಡಿ 28 (DaijiworldNews/AK): ಇತಿಹಾಸ ಕಂಡರಿಯದ ನರಹತ್ಯೆ ಪ್ಯಾಲೆಸ್ತೀನ್ ನಲ್ಲಿ ನಡೆಯುತ್ತಿದೆ . ಇದು ಯುದ್ಧ ಅಲ್ಲ . ಸೈನ್ಯವು ನಡೆಯುತ್ತಿರುವ ಏಕಪಕ್ಷೀಯ ವಾದ ಹಿಂಸೆ ಎಂದು ಸಿಪಿಎಂ ರಾಷ್ಟ್ರೀಯ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದರು.
ಅವರು ಗುರುವಾರ ನಗರದ ಹೊರವಲಯದ ಚೆರ್ಕಳ ದಲ್ಲಿ ಸಿಪಿಐ ಎಂ ಜಿಲ್ಲಾ ಸಮಿತಿ ಆಯೋಜಿಸಿದ ಪ್ಯಾಲೆಸ್ತಿನ್ ಐಕ್ಯತಾ ಸದಸ್ ಉದ್ಘಾಟಿಸಿ ಮಾತನಾಡಿ, ಇಸ್ರೇಲ್ ನಡೆಸುತ್ತಿರುವ ಇಂತಹ ಹಿಂಸೆಗಳನ್ನು ಇಂದಿಗೂ ಕ್ಷಮಿಸಲಾಗದು . ಕದನ ವಿರಾಮಕ್ಕೆ ಇಸ್ರೇಲ್ ಮುಂದೆ ಬರಬೇಕು . ನರೇಂದ್ರ ಮೋದಿ ಇಸ್ರೇಲ್ ಪರ ವಾಗಿದ್ದಾರೆ. ಇದು ನಮ್ಮ ವಿದೇಶಿ ನೀತಿ ವಿರುದ್ಧವಾಗಿದೆ ಎಂದು ಯೆಚೂರಿ ಅಭಿಪ್ರಾಯ ಪಟ್ಟರು.
ಉದುಮ ಶಾಸಕ ಸಿ . ಎಚ್ ಕುಂಞ೦ಬು, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ . ವಿ ಬಾಲಕೃಷ್ಣನ್ ಮಾಸ್ಟರ್, ರಾಜ್ಯ ಸಮಿತಿ ಸದಸ್ಯ ಕೆ ಪಿ ಸತೀಶ್ಚಂದ್ರನ್ , ವಿ .ಪಿ. ಪಿ ಮುಸ್ತಫಾ ,ಸಿಪಿಐ ಮುಖಂಡ ಕೆ . ವಿ ಕೃಷ್ಣನ್ , ಮಾಜಿ ಸಂಸದ ಪಿ. ಕರುಣಾಕರನ್ , ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ , ಉಪಾಧ್ಯ ಕ್ಷ ಶಾನ್ ವಾಸ್ , ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿಎನ್ . ಅಲಿ ಅಬ್ದುಲ್ಲಾ , ಹುಸೈನ್ ಮಡವೂರು, ಎಡಪಕ್ಷದ ಮುಖನಾದರಾದ ಕರೀಂ ಚಂದೇರ , ಹಮೀದ್ ಹಾಜಿ , ಅನಂತನ್ ನಂಬಿಯಾರ್ , ಸನ್ನಿ ಅರಮನ ಮೊದಲಾದವರು ಮಾತನಾಡಿದರು.