ಉಳ್ಳಾಲ, ಡಿ 28 (DaijiworldNews/ AK): ಭಾರತೀಯ ಫಿಸಿಯೋಥೆರಪಿಗಳಿಗೆ ವಿಶ್ವದಾದ್ಯಂತ ಮನ್ನಣೆ ಇದ್ದು, ಡಿಪ್ಲೊಮಾದಿಂದ ಡಾಕ್ಟರೇಟ್ ಹಂತವನ್ನು ಕ್ಷೇತ್ರ ತಲುಪಿದೆ. ಫಿಸಿಯೋಥೆರಪಿಗಳು ಉತ್ಸಾಹಭರಿತರಾಗಿ ಕಾರ್ಯನಿರ್ವಹಿಸಿರಿ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ದ ಸಿಂಡಿಕೇಟ್ ಸದಸ್ಯ ಡಾ.ಯು.ಟಿ ಇಫ್ತಿಕಾರ್ ಆಲಿ ಹೇಳಿದರು.
ಅವರು ನಿಟ್ಟೆ ಫಿಸಿಯೊಥೆರಪಿ ಸಂಸ್ಥೆ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಡಿಟೋರಿಯಂನಲ್ಲಿ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ,
ಶಾರ್ಜಾ ಮೆಡಿಯೋರ್ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಹಳೆವಿದ್ಯಾರ್ಥಿ ವಿಭಾಗ ಮುಖ್ಯಸ್ಥರಾಗಿ , ಬೆಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಂಸ್ಥೆಗೆ ಸಲ್ಲುವ ಗೌರವ. 1993-95 ಫಿಸಿಯೋಥೆರಪಿ ವಿಭಾಗವನ್ನು ಮಸಾಜ್ ಎಂದೇ ಕರೆಯಲಾಗುತಿತ್ತು.
ನಿರಂತರ ಪ್ರತಿಭಟನೆಗಳು, ರಾಜೀವ್ ಗಾಂಧಿ ವಿಶ್ವವಿದ್ಯಾಲಯ ದ ಜೊತೆಗೆ ಹೋರಾಡಿ, ಫಿಸಿಯೊಥೆರಪಿ ಬೋಧಕರ ಪುರಸ್ಕಾರ, ನಿರಂತರ ಕಾರ್ಯಗಾರಗಳು, ಅಂತರಾಷ್ಟ್ರೀಯ ಸಮ್ಮೇಳನಗಳನ್ನು ಹಮ್ಮಿಕೊಂಡ ಪರಿಣಾಮವಾಗಿ ಇದೀಗ ಕ್ಷೇತ್ರ ಮಹತ್ತರ ಬದಲಾವಣೆ ಪಡೆದುಕೊಂಡಿದೆ.
ಪತ್ನಿ ಸರ್ಜನ್ ಆಗಿರುವುದರಿಂದ ತನ್ನ ಜೊತೆಗೆ ನಿಶ್ವಿತಾರ್ಥವಾಗುವ ಸಂದರ್ಭ ಫಿಸಿಯೋ ವಿಭಾಗವನ್ನು ಹಿಯಾಳಿಸಿದವರು ಅನೇಕರು. ಸೈಕೋ ವಿಭಾಗದವರು ಎಂದು ಕರೆಯುವ ದಿನಗಳಿದ್ದವು. ಆದರೆ ಪ್ರಸ್ತುತ ಗೌರವಿಸುವ, ಗುರುತಿಸುವ ಕ್ಷೇತ್ರವಾಗಿ ಫಿಸಿಯೋಥೆರಪಿ ಹೊರಹೊಮ್ಮಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡ ಸಂದರ್ಭ ಆರ್ಥೊಸರ್ಜನ್ ಹೇಳಿದಂತೆ ಫಿಸಿಯೋಥೆರಪಿ ನಡೆಸಿ ಆರೋಗ್ಯಯುತವಾಗಿ ಹೊರಬಂದ ಬಳಿಕ ಅದೇ ಕೋರ್ಸನ್ನು ಪಡೆಯುವಂತಾದೆ.
ವಿಶ್ವದೆಲ್ಲೆಡೆ ಭಾರತೀಯ ಫಿಸಿಷಿಯನ್ನರಿಗೆ ವಿಪುಲ ಅವಕಾಶಗಳ ಜೊತೆಗೆ ಗೌರವ ಇದೆ. ವಿದ್ಯಾರ್ಥಿಗಳು ಮಂಗಳೂರಿನ ಬಾಂಧವ್ಯವನ್ನು ಉತ್ತಮವಾಗಿಸಿ, ನಾಡಿನ ಗೌರವ ಕಾಪಾಡಿಕೊಂಡು ಮುಂದುವರಿಯಬೇಕಿದೆ.
ಸಹೋದರ ಯು.ಟಿ ಖಾದರ್ ಆರೋಗ್ಯ ಸಚಿವರಾಗಿದ್ದ ಸಂದರ್ಭ ರಾಜ್ಯಕ್ಕೆ ಮೊದಲ ಸರಕಾರಿ ಫಿಸಿಯೋಥೆರಪಿ ಕಾಲೇಜು ಬೆಂಗಳೂರಿನಲ್ಲಿ ಸಂಜಯ್ ಗಾಂಧಿ ಸ್ಮಾರಕ ಕಾಲೇಜು ಸ್ಥಾಪಿಸಲಾಗಿದೆ.ಇದೀಗ ಡಿಪ್ಲೊಮಾದಿಂದ , ಪದವಿ, ಸ್ನಾತಕೋತ್ತರ ಇದೀಗ ಡಾಕ್ಟರೇಟ್ ವರೆಗೂ ಕ್ಷೇತ್ರ ಮುಂದುವರಿದಿದೆ ಎಂದರು.
ನಿಟ್ಟೆ ಬಯೋಕೆಮೆಸ್ಟ್ರಿ ವಿಭಾಗಮುಖ್ಯಸ್ಥೆ ಡಾ.ಸುಕನ್ಯಾ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ.ದಾಣೇಶ್ ಕುಮಾರ್ ಕೆ.ಯು, ಕೃಷ್ಣಪ್ರಸಾದ್ ಕೆ.ಎಂ ಉಪಸ್ಥಿತರಿದ್ದರು.