ಉಪ್ಪಿನಂಗಡಿ, ಡಿ 28 (DaijiworldNews/AA): ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಮರವೊಂದು ವಿದ್ಯುತ್ ತಂತಿ ಸಮೇತ ಚಲಿಸುತ್ತಿದ್ದ ಲಾರಿಯ ಮೇಲೆ ಬಿದ್ದ ಘಟನೆ ಉಪ್ಪಿನಂಗಡಿ ಬೇರಿಕೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಬೊಳುವಾರು - ಉಪ್ಪಿನಂಗಡಿ ಹೆದ್ದಾರಿಯಲ್ಲಿ ಬೇರಿಕೆಯಿಂದ ಬೊಳಂತಿಲದವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದೆ. ರಸ್ತೆ ಕಾಮಗಾರಿಗಾಗಿ ಹಿಟಾಚಿನಲ್ಲಿ ಮಣ್ಣು ತೆಗೆಯುತ್ತಿದ್ದಾಗ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಯೊಂದರ ಮೇಲೆ ಮರ ಬಿದ್ದಿದೆ. ಇದೇ ವೇಳೆ ಮರವು ವಿದ್ಯುತ್ ತಂತಿಗೂ ತಗುಲಿದ್ದ ಕಾರಣ ಐದು ವಿದ್ಯುತ್ ಕಂಬಗಳೂ ಉರುಳಿಬಿದ್ದಿದೆ ಎನ್ನಲಾಗಿದೆ.
ಆದರೆ ಘಟನೆಯಿಂದ ಯಾರಿಗೂ ಅಪಾಯ ಉಂಟಾಗಿಲ್ಲ ಪ್ರಾಣಪಾಯದಿಂದ ಪಾರು. ಆದರೆ ಮರ ಬಿದ್ದ ಪರಿಣಾಮ ಲಾರಿಗೆ ಹಾನಿಯುಂಟಾಗಿದೆ. ಹಾಗೇ ಈ ಸಂದರ್ಭ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು ಎಂದು ತಿಳಿದು ಬಂದಿದೆ.