ಮಂಗಳೂರು, ಡಿ 27 (DaijiworldNews/MS): ಅಕ್ರಮವಾಗಿ ದಾಸ್ತಾನು ಇರಿಸಿದ್ದ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಶಕ್ಕೆ ಪಡೆದ ಘಟನೆ ನಡೆದಿದೆ.
ಮಂಗಳೂರಿನ ಕಣ್ಣೂರು ಗ್ರಾಮದ ಬಡ್ಲ ಗುತ್ತು ಎಂಬಲ್ಲಿ ಅನಧಿಕೃತವಾಗಿ ಸಾಮಾನ್ಯ ಮರಳನ್ನು ದಾಸ್ತಾನು ಮಾಡಿರುತ್ತಾರೆ ಎಂಬ ಮಾಹಿತಿ ಪಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ಇ.ಸಿ ದ್ವಿತೀಯ, ಹಿರಿಯ ಭೂವಿಜ್ಞಾನಿ ಕೆ.ಎಂ ನಾಗಭೂಷಣ್ ಹಾಗೂ ಭೂವಿಜ್ಞಾನಿಗಳು ಡಿ.27ರಂದು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ಸ್ಥಳದಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಸುಮಾರು 750 ಮೆ.ಟನ್ ಪ್ರಮಾಣದ ಸಾಮಾನ್ಯ ಮರಳನ್ನು ಇಲಾಖಾ ವಶಕ್ಕೆ ಪಡೆದುಕೊಂಡಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.