ಹಿರಿಯಡ್ಕ, ಡಿ 26 (DaijiworldNews/MS): ಈಜಲು ತೆರಳಿದ್ದ ಯುವಕ ಹೊಳೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈರಂಪಳ್ಳಿ ಗ್ರಾಮದ ಕೆ.ಸಿ.ರೋಡ್ನ ಪಟ್ಟಿಬಾವು ಹೊಳೆಯಲ್ಲಿ ನಡೆದಿದೆ.
ಮೃತರನ್ನು ಎಲೆಕ್ಟ್ರೀಷಿಯನ್ ಕೆಲಸ ಮಾಡುತಿದ್ದ ಅಜಯ್ (21) ಎಂದು ಗುರುತಿಸಲಾಗಿದೆ. ಇವರು ವಾಲಿಬಾಲ್ ಆಡಲೆಂದು ರವಿವಾರ ಅಪರಾಹ್ನ ಕೆ.ಸಿ.ರೋಡ್ಗೆ ತೆರಳಿದ್ದರು. ವಾಲಿಬಾಲ್ ಆಡಿದ ಬಳಿಕ 2:30ರ ಸುಮಾರಿಗೆ ಸ್ನೇಹಿತರೆಲ್ಲರೂ ಹೊಳೆಯ ದಂಡೆಯಲ್ಲಿ ಕುಳಿತಿದ್ದು, ಅಜಯ್ ತಾನು ಈಜಿಕೊಂಡು ನದಿಯ ಇನ್ನೊಂದು ದಡಕ್ಕೆ ಹೋಗುವುದಾಗಿ ಹೇಳಿ ಹೊಳೆಗೆ ಇಳಿದಿದ್ದು, ಮಧ್ಯದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟರು. ಬಳಿಕ ಸ್ಥಳೀಯರೊಬ್ಬರು 4 ಗಂಟೆ ಸುಮಾರಿಗೆ ಮೃತದೇಹವನ್ನು ಹೊರತೆಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.