ಸುರತ್ಕಲ್, ಡಿ 25(daijiworldNews/MS): ಇಲ್ಲಿನ ಬೈಕಂಪಾಡಿಯ ಎಪಿಎಂಸಿಯಲ್ಲಿ ಕಾರ್ಮಿಕರೊಬ್ಬರು ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಎಪಿಎಂಸಿಯಲ್ಲಿ ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಓಡಿಸಾ ರಾಜ್ಯದ ಜಾವಪುರ್ ಜಿಲ್ಲೆಯ ರಶ್ಮಿ ರಂಜನ್ (44) ಶವ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ಮೃತದೇಹದ ಬಲಕಾಲಿನ ಮಂಡಿಯ ಕೆಳಭಾಗದಲ್ಲಿ ಲಘುವಾಹನ ಗುದ್ದಿದ ಗುರುತುಗಳಿದ್ದು, ಅಪಘಾತಕ್ಕೀಡಾಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಸ್ಥಳಕ್ಕೆ ಪಣಂಬೂರು ಮತ್ತು ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.