ಉಡುಪಿ, ಡಿ 25 (DaijiworldNews/MR): ಉಡುಪಿ ಗಂಗೊಳ್ಳಿಯಲ್ಲಿ ದೋಣಿಗಳಿಗೆ ಬೆಂಕಿ ತಗುಲಿದ ಘಟನೆಗೆ ಸಂಬಂಧಿಸಿದಂತೆ 12 ಕೋಟಿ ರೂ. ಪರಿಹಾರ ನೀಡುವಂತೆ ನಾವು ಮುಖ್ಯಮಂತ್ರಿಗಳನ್ನು ಕೇಳಿದ್ದೇವೆ ಮತ್ತು ಅವರು ಪರಿಹಾರ ಹಣವನ್ನು ನೀಡಲು ಮನವಿ ಮಾಡಿಕೊಳ್ಳಲಾಗಿದೆ. ಜನವರಿ ಮೊದಲ ವಾರದಲ್ಲಿ ತಲಾ 10 ಲಕ್ಷ ರೂ. ಪರಿಹಾರ ಹಣ ನೀಡಲಾಗುವುದು ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.
ಭಾನುವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸರಕಾರ ಮೀನುಗಾರರ ಪರವಾಗಿದ್ದು, ಅವರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.
ಹಿಜಾಬ್ ಬಗ್ಗೆ ಪ್ರತಿಪಕ್ಷಗಳ ಚರ್ಚೆಯ ಕುರಿತು ಮಾತನಾಡಿದ ಅವರು, ಬಿಜೆಪಿ ಸುಳ್ಳು ಹೇಳುವುದು ಬಿಟ್ಟು ಏನಾದರೂ ಒಳ್ಳೇದು ಮಾಡಿದೆಯಾ ಎಂದು ಪ್ರಶ್ನಿಸಿದರು. ಯಾರ ಬಾಯಿಂದ ಏನು ವ್ಯತ್ಯಾಸ ಆಗುತ್ತದೆ ಎಂಬ ಕುತೂಹಲ ಬಿಜೆಪಿಗಿದೆ. ಮುಖ್ಯಮಂತ್ರಿಗಳು ಬಹಳ ಬುದ್ಧಿವಂತರು ಮತ್ತು ಯಾವುದೇ ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯ ಹೊಂದಿದ್ದಾರೆ. ನಾವು ಅದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ ಎಂದು ಹೇಳಿದ್ದಾರೆ.