ಸುರತ್ಕಲ್, ಡಿ 25 (DaijiworldNews/MR): ಪಣಂಬೂರು ಪಂಪ್ಹೌಸ್ನಿಂದ ಬಾಳ, ಕಾಟಿಪಳ್ಳ ಕೃಷ್ಣಾಪುರ, ಚೊಕ್ಕಬೆಟ್ಟು ಸುರತ್ಕಲ್ ಮತ್ತು ಮೂಲ್ಕಿಗೆ ನೀರು ಸಾಗಿಸುವ 400 ಎಂಎಂ ಪೈಪ್ನಲ್ಲಿ ಬೈಕಂಪಾಡಿ ಸೇತುವೆಯ ಕೆಳಭಾಗದಲ್ಲಿ ನೀರು ಸೋರಿಕೆಯಾಗಿದೆ. ಇದರಿಂದ ಕಡಿಮೆ ಒತ್ತಡದಲ್ಲಿ ನೀರು ಪೂರೈಕೆಯಾಗುತ್ತಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ.
ಬೈಕಂಪಾಡಿ ರೈಲು ಹಳಿ ಬಳಿ ಇರುವ ಈ ಪೈಪ್ನಲ್ಲಿ ನೀರು ಸೋರಿಕೆಯಾಗುತ್ತಿದ್ದು, ಬಾಳ, ಕಾಟಿಪಳ್ಳ, ಕೃಷ್ಣಾಪುರ, ಚೊಕ್ಕಬೆಟ್ಟು, ಸುರತ್ಕಲ್, ಮೂಲ್ಕಿ ಭಾಗಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.
ಆದ್ದರಿಂದ, ಪೈಪ್ನಿಂದ ನೀರಿನ ಸೋರಿಕೆಯನ್ನು ಸರಿಪಡಿಸ ಬೇಕೆಂದರೆ ರೈಲ್ವೇ ಅವರ ಸಿಗ್ನಲ್ ಕೇಬಲ್ ಕೊಳವೆಯ ಮೇಲಿರುವುದರಿಂದ ರೈಲ್ವೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಅವರ ಅನುಮತಿ ದೊರೆತ ಬಳಿಕ ದುರಸ್ತಿ ಕಾರ್ಯ ಆರಂಭವಾಗಲಿದೆ. ದುರಸ್ತಿ ಕಾರ್ಯದ ವೇಳೆ ಸೂಚಿಸಿದ ಸ್ಥಳಗಳಿಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಪಾಲಿಕೆ ತಿಳಿಸಿದೆ.