ಬೆಳ್ತಂಗಡಿ, ಡಿ 24(DaijiworldNews/AK): 2023-24 ಸಾಲಿನ ಮಂಗಳೂರು ಯೂನಿವರ್ಸಿಟಿ ತಂಡವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಕ್ಯಾಲಿಕಟ್ ನಲ್ಲಿ ಡಿ.28 ರಂದು ನಡೆಯುತ್ತಿರುವ ಸೌತ್ ಜೋನ್ ಫುಟ್ಬಾಲ್ ಪಂದ್ಯಾಟಕ್ಕೆ ಉಜಿರೆ ಎಸ್.ಡಿ.ಎಮ್ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಚಂದ್ರಿಕಾ (20) ಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಅಂಕಾಜೆ ದಿ.ಮೋಹನ್ ಮತ್ತು ಯಶೋಧ ದಂಪತಿಗಳ ಮೊದಲ ಪುತ್ರಿ ಚಂದ್ರಿಕಾ ಹಲವು ಕ್ರೀಡಾಕುಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇವರು 2022-23 ಸಾಲಿನ ಕೇರಳ ಕೊಚ್ಚಿಯಲ್ಲಿ ನಡೆದ ಹ್ಯಾಂಡ್ವಾಲ್ ಪಂದ್ಯಾಟದಲ್ಲಿ ಮಂಗಳೂರು ಯೂನಿವರ್ಸಿಟಿ ತಂಡವನ್ನು ಪ್ರತಿನಿಧಿಸಿ ಸೌತ್ ಜೋನ್ ಆಡಿದ್ದಾರೆ.2022-23 ಸಾಲಿನ ಬೆಂಗಳೂರಿನಲ್ಲಿ ನಡೆದ ಅಮೇಚೂರ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾಳೆ.
2022-23ಸಾಲಿನ ಉಡುಪಿಯಲ್ಲಿ ನಡೆದ ಮಂಗಳೂರು ಯೂನಿವರ್ಸಿಟಿ ಗೇಮ್ ನಲ್ಲಿ 400 ಮೀಟರ್ hardals ನಲ್ಲಿ ದ್ವಿತೀಯ ಸ್ಥಾನ ಮತ್ತು 4.400 ಮೀಟರಿನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.2022-23 ಸಾಲಿನಲ್ಲಿ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆ.
2023-24ಸಾಲಿನಲ್ಲಿ ನಡೆದ ಮಂಗಳೂರುನಲ್ಲಿ ನಡೆದ ರಾಜ್ಯ ಮಟ್ಟದ ಅಮೇಚುರ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆ.2023-24 ಸಾಲಿನಲ್ಲಿ ಮಂಗಳೂರಿನಲ್ಲಿ ನಡೆದ ಮಂಗಳೂರು ಯೂನಿವರ್ಸಿಟಿ ರೇಸಿಂಗ್ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.