ಪುತ್ತೂರು,ಡಿ24 (daijiworldNews/RA):ನಾಲ್ಕನೇ ಶನಿವಾರದಂದು ವೈದ್ಯರು ರಜೆಯಲ್ಲಿದ್ದಾರೆ ಎಂದು ಹೇಳಿ ರೋಗಿಗಳನ್ನು ವಾಪಸ್ ಕಳುಹಿಸಿರುವ ವಿಲಕ್ಷಣ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ವಾರಾಂತ್ಯ ಮತ್ತು ಕ್ರಿಸ್ಮಸ್ ರಜೆಯ ನಂತರ ಮಂಗಳವಾರ ಬರಲು ರೋಗಿಗಳಿಗೆ ತಿಳಿಸಲಾಯಿತು. ಉತ್ತರ ಭಾರತ ಮೂಲದ ಉಪ್ಪಿನಂಗಡಿಯ ಕೆಫೆಟೇರಿಯಾದ ಉದ್ಯೋಗಿಗಳಾದ ಶಮೀಮ್ ಮತ್ತು ರಹೀಮ್ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಚಿಕಿತ್ಸೆಗಾಗಿ ಶುಕ್ರವಾರ ರಾತ್ರಿ ವೇಳೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. ಅವರ ರಕ್ತ ಪರೀಕ್ಷೆ ಮಾಡಬೇಕಾಗಿರುವುದರಿಂದ ಜ್ವರದ ಪ್ರಮಾಣ ಕಡಿಮೆಯಾಗದಿದ್ದರೆ ಶನಿವಾರ ಮತ್ತೆ ಆರೋಗ್ಯ ಕೇಂದ್ರಕ್ಕೆ ಬರುವಂತೆ ಸೂಚಿಸಲಾಗಿದೆ.
ಆದರೆ, ಶನಿವಾರ ಇಬ್ಬರು ಕಾರ್ಮಿಕರು ಆರೋಗ್ಯ ಕೇಂದ್ರಕ್ಕೆ ಆಗಮಿಸಿದಾಗ ವೈದ್ಯರು ರಜೆಯಲ್ಲಿದ್ದಾರೆ ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ ಅಂತ ಹೇಳಲಾಗಿದೆ.