ಉಡುಪಿ, ಡಿ 23 (DaijiworldNews/AK):ಹಿಜಾಬ್ ನಿಷೇಧ ವಾಪಾಸ್ ವಿಚಾರ ಸಿಎಂ ಹೇಳಿಕೆಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದೇಶ ಕೈ ಸೇರಿದ ಬಳಿಕ ಇದಕ್ಕೆ ಸರಿಯಾದ ಉತ್ತರವನ್ನು ನೀಡುತ್ತೇವೆ.ಒಂದು ವೇಳೆ ಯಾವುದೇ ಸಂಘರ್ಷ ಪ್ರಾರಂಭ ಆದರೆ ಅದಕ್ಕೆ ರಾಜ್ಯ ಸರ್ಕಾರ ನೇರ ಕಾರಣ ಎಂದು ಆರೋಪಿಸಿದರು.
ಸಿದ್ದರಾಯ್ಯ ಸಕರಾರಕ್ಕೆ ದೇಶ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತೆ ಇಲ್ಲ.ವಿದ್ಯಾರಥಿ, ಶಿಕ್ಷಣ ಸಂಸ್ಥೆಗೆ ಯಾವುದೇ ಅನುದಾನ ನೀಡಿಲ್ಲ.ಸಿದ್ದರಾಮಯ್ಯ 76-77 ರ ಹರೆಯದಲ್ಲಿ ಇದ್ದಾರೆ. ಭವಿಷ್ಯದಲ್ಲಿ ನಿವೃತ್ತಿ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇರಬಹುದು.ಈ ಸಂದರ್ಭದಲ್ಲಿ ಇಡೀ ಕರ್ನಾಟಕ ವನ್ನು ಸರ್ವನಾಶ ಮಾಡುವ ಕೆಲಸಕ್ಕೆ ಕೈ ಹಾಕುವ ಕೆಲಸ ಮಾಡಿದ್ದಾರೆ ಎಂದರು.
ನಾವಾಗಿ ಯಾವುದೇ ಬೇಧ ಭಾವ ಮಾಡಿಲ್ಲವಿಷ ಬೀಜ ಬಿತ್ತುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ.ಪಿಎಫ್ಐ ಅನ್ನು ಬ್ಯಾನ್ ಮಾಡಿದ್ದಾರೆ.ಆದರೆ ಈಗ ಪಿಎಫ್ಐ ಗೂ ಕಾಂಗ್ರೆಸ್ ಗೂ ನಂಟು ಇರುವಂತೆ ಕಾಣುತ್ತದೆ. ಅಪ್ಪ ಒಂದೇ – ಅಮ್ಮ ಎರಡು ಇರುವಂತೆ ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.
ಉಡುಪು ಅವರವರ ಇಷ್ಟ ಹಿಜಾಬ್ ನಿಷೇಧ ವಾಪಾಸ್ ಗೆ ಹೇಳಿದೀನಿ. ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಜಾಬ್ ನಿಷೇಧವನ್ನು ವಾಪಾಸ್ ಪಡೆಯಲು ಹೇಳಿದೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.