ಉಡುಪಿ, ಡಿ 23 (DaijiworldNews/AK):ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಗೆ ಬದ್ದರಾಗಿ ಇದನ್ನು ಸುತ್ತೋಲೆ ಮೂಲಕ ನೀಡಬೇಕು. ಹಿಜಾಬ್ ವಿದ್ಯಾರ್ಥಿಗಳ ಪರವಾಗಿ ಕೋರ್ಟ್ ಮೆಟ್ಟಲೇರಿದ್ದ ಎಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ನ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಆಗ್ರಹಿಸಿದರು.
ಇದು ಸುತ್ತೋಲೆಯಾಗಿ ಎಲ್ಲಾ ಶಾಲೆ ಕಾಲೇಜುಗಳನ್ನು ತಲುಪಬೇಕುಲಕ್ಷಾಂತರ ಜನ ಮುಸ್ಲಿಂ ಹುಡುಗಿಯರು ಈ ದೇಶದಲ್ಲಿ ಯಾವುದೇ ಭಯ, ಆತಂಕ ಇಲ್ಲದೇ ಈ ರಾಜ್ಯದಲ್ಲಿ ಶಿಕ್ಷಣ ಪಡೆಯುವಂತೆ ಆಗಬೇಕು ಎಂದರು.
ಸುತ್ತೋಲೆ ಬಿಡುಗಡೆ ಆದ ಮೇಲೆ ಸುಪ್ರಿಂ ಕೋರ್ಟ್ ನಲ್ಲಿ ಇರುವ ಅರ್ಜಿಗಳನ್ನುಹಿಂಪಡೆಯಲು ಸಾಧ್ಯ ಇದೆ.ಸಂವಿಧಾನಬದ್ದ ಹಕ್ಕನ್ನು ಪುನರ್ ಸ್ಥಾಪಿಸಿದ್ದಕ್ಕಾಗಿ ನಿಮಗೆ ಧನ್ಯವಾದ ಎಂದು ಹೇಳಿದರು.