ಉಡುಪಿ, ಡಿ 23 (DaijiworldNews/AK):ಕರ್ನಾಟಕದಲ್ಲಿ ಹಿಜಾಬ್ ನಿಷೇಧ ವಾಪಾಸ್ ಪಡೆಯುತ್ತೇವೆ ಎಂಬ ಸಿಎಂ ಹೇಳಿಕೆ ತಪ್ಪು ಇದೆ ಎಂದು ಮಾಜಿ ಶಾಸಕ ರಘಪತಿ ಭಟ್ ಹೇಳಿದ್ದಾರೆ.
ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ,ಹಿಜಾಬ್ ಬ್ಯಾನ್ ಈ ರಾಜ್ಯದಲ್ಲಿ ಆಗಿಲ್ಲ.ಹಿಂದೆ ಬಿಜೆಪಿ ಸರಕಾರ ಇರುವಾಗ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿತ್ತು.ಹಿಜಾಬ್ ಬ್ಯಾನ್ ಆಗಿದ್ದಲ್ಲಿ ಅದು ತಪ್ಪೇ, ಸಾರ್ವಜನಿಕ ಸ್ಥಳದಲ್ಲಿ ಧರಿಸಬಹುದು, ಕಾಲೇಜು ಆವರಣದಲ್ಲಿ ಧರಿಸಬಹುದು,ಆದರೆ ಕ್ಲಾಸ್ ರೂಂ ನಲ್ಲಿ ಮಾತ್ರ ಹಾಕಲು ಇಲ್ಲ ಎಂದಿತ್ತು.
ಹೈ ಕೋರ್ಟ್ ಕೂಡಾ ಇದನ್ನು ಹೇಳಿದೆ. ಅವರ ಹೇಳಿಕೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೀಡಿರುವ ಹೇಳಿಕೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಈಗ ಹಿಜಾಬ್ ವಿಚಾರ ಸುಪ್ರಿಕೋರ್ಟ್ ನಲ್ಲಿ ಇದೆ.ಅಲ್ಲಿ ಇತ್ಯರ್ಥ ಆಗದೇ ಆದೇಶ ರದ್ದು ಮಾಡಲು ಅವಕಾಶ ಇಲ್ಲ.ಮುಸ್ಲಿಂ ಮತ ಬ್ಯಾಂಕ್ ನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೀಡಿರುವ ಹೇಳಿಕೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದರಲ್ಲಿ ಯಾವುದೇ ನೈಜ ಶೈಕ್ಷಣಿಕ ದೃಷ್ಟಿ ಇಲ್ಲ.ಇದು ಸಂಘರ್ಷಕ್ಕೆ ಕೂಡಾ ಕಾರಣ ಆಗಬಹುದು.ಈಗ ಎಲ್ಲಾ ಮಕ್ಕಳು ಸಮಾನವಾಗಿ ಕ್ಲಾಸ್ ನಲ್ಲಿ ಕುಳಿತುಕೊಂಡು ಪಾಠ ಕೇಳುತ್ತಿದ್ದಾರೆ.ಹೀಗೆ ಮಾಡಿದರೆ ಮತ್ತೆ ಕೇಸರಿ – ಹಿಜಾಬ್ ಸಂಘರ್ಷ ಪ್ರಾರಂಭ ಆಗುತ್ತದೆ. ಸಿದ್ದರಾಮಯ್ಯ ನವರಿಗೆ ಅದೇ ಬೇಕಾಗಿದೆ ಎಂದು ಟೀಕಿಸಿದ್ದಾರೆ.