ಮಂಗಳೂರು ನ 14 : ರೈತರು ತಮ್ಮ ಜಮೀನಿನಲ್ಲಿ ಬೆಳೆ ವಿವರವನ್ನು ಪಹಣಿಪತ್ರದಲ್ಲಿ ನಮೂದಿಸಲು ಇನ್ನು ಮುಂದೆ ಕೇಂದ್ರಕ್ಕೆ ಬಂದು ಯಾವುದೇ ಅರ್ಜಿ ಸಲ್ಲಿಸಿ ಕಾಯಬೇಕಿಲ್ಲ , "ರೈತರ ಬೆಳೆ ಸಮೀಕ್ಷೆ ಆಪ್" ಮೂಲಕ ಇನ್ನು ಮುಂದೆ ಪಹಣಿಪತ್ರದಲ್ಲಿ ತಾವೆ ನೋಂದಣಿ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ. ಡಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಆಂಡ್ರ್ಯಾಡ್ ಮೊಬೈಲ್ ಉಳ್ಳ ರೈತರು " farmers crop survery app" ಡೌನ್ ಲೋಡ್ ಮಾಡಿ ಇದರ ಸದುಪಯೋಗ ಪಡೆಯಬಹುದೆಂದು ಮಾಹಿತಿ ನೀಡಿದರು.
ಇದೇ ವೇಳೆ ಜಿಲ್ಲೆಯಲ್ಲಿ ಆಹಾರ ಇಲಾಖೆ, ಕಾರ್ಮಿಕ ಇಲಾಖೆ, ಅರಣ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಂದ ಗುರುತಿಸಲ್ಪಟ್ಟಿರುವ ಫಲಾನುಭವಿಗೆ ನೀಡುವ ಯೋಜನೆಯನ್ನು ಒಗ್ಗೂಡಿಸಿ ಅರ್ಹ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ಒದಗಿಸಲು " ಮುಖ್ಯಮಂತ್ರಿ ಅನಿಲ ಭಾಗ್ಯ " ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.