ಉಡುಪಿ,ಡಿ23(daijiworldNews/RA):ಟೆಲಿಗ್ರಾಮ್ ಆಪ್ ನಲ್ಲಿ ಹಣ ತೊಡಗಿಸಿಕೊಂಡರೆ ಹೆಚ್ಚಿನ ಲಾಭ ನೀಡುವುದಾಗಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಸೂಡ ಗ್ರಾಮದ ನಿವಾಸಿಯಾಗಿರುವ ದಿಲೀಪ್(56) ಎಂಬವರು ಟೆಲಿಗ್ರಾಮ್ ಆಪ್ ನಲ್ಲಿ ಹೆಚ್ಚಿನ ಲಾಭದ ಉದ್ದೇಶದಿಂದ ಹಣ ಹಾಕಿ ಈಗ ಮೋಸ ಹೋದ ವ್ಯಕ್ತಿಯಾಗಿದ್ದಾರೆ.
ಇವರ ವಾಟ್ಸ್ ಪ್ ಗೆ ನಂಬರ್ ಗೆ ಟ್ರೇಡಿಂಗ್ ಟಾಸ್ಕ್ ಬಗ್ಗೆ ಸಂದೇಶವೊಂದು ಬಂದಿತ್ತು.
ತದನಂತರ ದಿಲೀಪ್ ಅವರು ಆ ನಂಬರನ್ನು ಸಂಪರ್ಕ ಮಾಡಿದಾಗ ಟೆಲಿಗ್ರಾಮ್ ಆಪ್ ನಲ್ಲಿ ಹಣ ತೊಡಗಿಸಿದರೆ, ಹೆಚ್ಚಿನ ಲಾಭಾಂಶದ ನೀಡುವು ದಾಗಿ ನಂಬಿಸಿದ್ದರು.
ಅದರಂತೆ ಜೂ.18ರಂದು ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 3,44,200ರೂ. ಹಣವನ್ನು ಆನ್ ಲೈನ್ ಮೂಲಕ ದೂರುದಾರ ವ್ಯಕ್ತಿ ಜಮೆ ಮಾಡಿದ್ದರು.
ಆದರೆ ಆರೋಪಿಗಳು ಲಾಭಾಂಶವನ್ನು ನೀಡಿಲ್ಲ. ಮಾತ್ರವಲ್ಲ ಜಮೆ ಮಾಡಿದ ಹಣವನ್ನೂ ಹಿಂತಿರುಗಿಸದೇ ಮೋಸ ಮಾಡಿದ್ದಾರೆ ಎಂದು ದಿಲೀಪ್ ಅವರು ದೂರು ದಾಖಲಿಸಿದ್ದಾರೆ.