ಮಂಗಳೂರು,ಡಿ 21 (DaijiworldNews/MS): ಗ್ಯಾಸ್ ಬಳಕೆದಾರರು ಗ್ಯಾಸ್ ಏಜನ್ಸಿಗೆ ತೆರಳಿ ಆಧಾರ ಬಯೋಮೆಟ್ರಿಕ್ ದೃಡೀಕರಣ ನೀಡಲು ಯಾವುದೇ ಗಡುವು ನಿಗದಿಪಡಿಸಿಲ್ಲ.
ಗ್ಯಾಸ್ ಸಂಪರ್ಕ ಇರುವವರು ತಮ್ಮ ಏಜನ್ಸಿಗೆ ತೆರಳಿ ಬಯೋಮೆಟ್ರಿಕ್ ನೀಡಬಹುದಾಗಿದೆ ಮೊದಲ ಆದ್ಯತೆಯಲ್ಲಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ಪಡೆದಿರುವರು ಬಯೋಮೆಟ್ರಿಕ್ ನೀಡಬೇಕಾಗಿದೆ. ಉಳಿದಂತೆ, ಆಧಾರ್ ಸಂಖ್ಯೆ ದಾಖಲೆಯೊಂದಿಗೆ ಹಿಂದೆ ಗ್ಯಾಸ್ ಸಂಪರ್ಕ ಪಡೆದ ಫಲಾನುಭವಿಗಳು ಬಯೋಮೆಟ್ರಿಕ್ ನೀಡಬೇಕಾಗಿದೆ. ಆದರೆ ಈ ದೃಢೀಕರಣ ನೀಡಲು ಕೇಂದ್ರ ಸರ್ಕಾರ ಯಾವುದೇ ಗಡುವು ವಿಧಿಸಿಲ್ಲ.
ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ಆಹಾರ ಇಲಾಖೆಯ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.