ಬಂಟ್ವಾಳ, ನ 14: ಮನೆಗೆಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ಯುವಕರು ಮಹಿಳೆಯೋರ್ವರ ಗಮನ ಬೇರೆಡೆ ಸೆಳೆದು ಬಂಗಾರದ ಕರಿಮಣಿ ಸರವನ್ನು ಕತ್ತಿನಿಂದ ಕಿತ್ತುಕೊಂಡು ಹೋದ ಘಟನೆ ಮದ್ಯಾಹ್ನ ವೇಳೆ ನಡೆದಿದೆ. ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಕೈತ್ರೋಡಿ ನಿವಾಸಿ ನೇತ್ರಾವತಿ ಎಂಬವರು ಸಿದ್ದಕಟ್ಟೆಗೆ ಹೋಗಿ ರಾಯಿಯಲ್ಲಿ ಬಸ್ ನಿಂದ ಇಳಿದು ಮನೆಗೆ ವಾಪಾಸು ರಸ್ತೆಯಲ್ಲಿ ನಡದು ಕೊಂಡು ಹೋಗುತ್ತಿದ್ದ ವೇಳೆ ಸಿದ್ದಕಟ್ಟೆ ಕಡೆಯಿಂದ ಇಬ್ಬರು ಬಿಳಿ ಬಣ್ಣದ ಜುಪಿಟರ್ ದ್ವಿಚಕ್ರ ವಾಹನದಲ್ಲಿ ಬಂದ ಯುವಕರು ನೇತ್ರಾವತಿಯವರ ಕುತ್ತಿಗೆಯಲ್ಲಿದ್ದ 4 ಪವನ್ ಚಿನ್ನದ ಕರಿಮಣಿಸರವನ್ನು ಎಳೆದುಕೊಂಡು ವಾಪಾಸು ಸಿದ್ದಕಟ್ಟೆ ಕಡೆಗೆ ಹೋಗಿದ್ದಾರೆ. ಈ ಎಲ್ಲಾ ಘಟನೆಗಳ ದೃಶ್ಯಾವಳಿಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಉಪನಿರೀಕ್ಷಕ ಪ್ರಸನ್ನ ಎನ್.ಎಸ್. ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.