ಮಂಗಳೂರು, ಡಿ 20 (DaijiworldNews/MS): ಬಳ್ಳಾಲ್ ಬಾಗ್ ನಲ್ಲಿರುವ ರೋಹನ್ ಸಿಟಿ ಸ್ಕ್ವೇರ್ ಕಟ್ಟಡದಲ್ಲಿ ಡಿ. 21ರಿಂದ 24ರವರೆಗೆ ಬೃಹತ್ ದ್ರಾಕ್ಷಾ ರಸ ಪ್ರದರ್ಶನ ( ವೈನ್ -ಮೇಳ)ವನ್ನು ಆಯೋಜಿಸಲಾಗಿದೆ.
ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ( ಸರ್ಕಾರಿ ಸ್ವಾಮ್ಯದ ಸಂಸ್ಥೆ ) ಇವರ ಅನುಮತಿಯಿಂದ,ನಗರದ ಪ್ರತಿಷ್ಠಿತ ಸಂಸ್ಥೆಗಳಾದ ರತ್ನಾಸ್ ವೈನ್ ಗೇಟ್ ಹಾಗೂ ರೋಹನ್ ಕಾರ್ಪೊರೇಷನ್ ಇವರ ಪ್ರಧಾನ ಪ್ರಾಯೋಜಕತ್ವದಲ್ಲಿ ಬಿ ಎಂ ಡಬ್ಲ್ಯೂ ಆಟೋ ಹೌಸ್,(BMW Autohous,) , ಹೋಟೆಲ್ ಬಿಎಂಎಸ್ ಹಾಗೂ ದಾಯ್ಜಿವರ್ಲ್ಡ್ ಮೀಡಿಯಾದ ಸಹಯೋಗದೊಂದಿಗೆ ಮೇಳವನ್ನು ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಹಿತ ದೃಷ್ಟಿಯಿಂದ ಬೆಳೆಗೆ ಉತ್ತಮ ಬೇಡಿಕೆ ಹಾಗೂ ಬೆಲೆ ಸಿಗುವ ಉದ್ದೇಶಕ್ಕಾಗಿ , ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ, ಕರ್ನಾಟಕ ದ್ರಾಕ್ಷಾ ರಸ ಮಂಡಳಿ ಹಾಗೂ ಕರ್ನಾಟಕದ ಸಮಸ್ತ ವೈನರೀಗಳ. (ವೈನ್ ಉತ್ಪಾದಕರ) ಸಹಕಾರದೊಂದಿಗೆ ದ್ರಾಕ್ಷಾ ರಸದ ಉತ್ಪಾದನೆ , ದಾಸ್ತಾನು ಹಾಗೂ ದ್ರಾಕ್ಷಾ ರಸದ ಪೇಯವನ್ನು ಸವಿಯುವ ವಿಧಾನ ಮಾತ್ರವಲ್ಲದೆ ಉತ್ತಮ ಆರೋಗ್ಯಕರ ಪಾನೀಯ ಎಂಬುದರ ಬಗ್ಗೆ ಉಪಯುಕ್ತ ಮಾಹಿತಿ ನೀಡಲಾಗುತ್ತದೆ.
"ಪ್ರದರ್ಶನ -ಸವಿಯುವಿಕೆ- ಮಾರಾಟ"(Exhibition- Tasting - Sale) ಎಂಬ ಘೋಷವಾಕ್ಯದೊಂದಿಗೆ ವೈನ್ - ಮೇಳ ಆಚರಿಸಲ್ಪಡುತ್ತಿದ್ದು ದ್ರಾಕ್ಷಾ ರಸ ಉತ್ಪಾದಕ ಸಂಸ್ಥೆಗಳ ಮೂಲಕ ಅತ್ಯಾಕರ್ಷಕ ದರ ಹಾಗೂ ಅತ್ಯುತ್ತಮ ಕೊಡುಗೆಗಳೊಂದಿಗೆ ಮಾರಾಟವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.