ಮಂಗಳೂರು, ಡಿ 19 (DaijiworldNews/AA): ಸೈನಿಕನೆಂದು ನಂಬಿಸಿ ಹಿರಿಯ ನಾಗರಿಕರೋರ್ವರಿಗೆ 2,41,999 ರೂ.ಗಳನ್ನು ವಂಚಿಸಿದ ಘಟನೆ ವರದಿಯಾಗಿದೆ.
ಹಿರಿಯ ನಾಗರಿಕರೋರ್ವರು ತಮ್ಮ ಅಪಾರ್ಟ್ ಮೆಂಟ್ ಬಾಡಿಗೆಗೆ ನೀಡುವ ಬಗ್ಗೆ ಜಾಹಿರಾತು ಹಾಕಿದ್ದರು. ಇದನ್ನು ಆಧರಿಸಿ ಅಪರಿಚಿತ ವ್ಯಕ್ತಿಯೋರ್ವ ತಾನು ಆಶೀಶ್ ಕುಮಾರ್ ಹಾಗೂ ತಾನೊಬ್ಬ ಸೈನಿಕನೆಂದು ಪರಿಚಯಿಸಿಕೊಂಡು ಮನೆ ಬಾಡಿಗೆ ಬಗ್ಗೆ ವಿಚಾರಿಸಿದ್ದಾನೆ.
ಬಾಡಿಗೆ ಮನೆ ಬಗ್ಗೆ ವಿಚಾರಿಸಿದ ಆರೋಪಿಯು ಮುಂಗಡ ಹಣ ಪಾವತಿಸುತ್ತೇನೆ ನಂತರ ಆರ್ಮಿಯ ಕಮಾಂಡಿಂಗ್ ಪೇಮೆಂಟ್ ಮೂಲಕ ಹಣ ಸಂದಾಯವಾಗುತ್ತದೆ ಎಂದು ತಿಳಿಸಿದ್ದಾನೆ.
1 ರೂ., 5 ರೂ., ಮತ್ತು 49,999 ರೂ. ಗಳ ಯುಪಿಐ ಕೋಡ್ ಅನ್ನು ಹಿರಿಯ ನಾಗರಿಕರಿಗೆ ವಾಟ್ಸಾಪ್ ನಲ್ಲಿ ಕಳುಹಿಸಿರುತ್ತಾನೆ. ಬಳಿಕ ಆರೋಪಿ ಹೇಳಿದಂತೆ ಹಿರಿಯ ನಾಗರಿಕರು ಮೊಬೈಲ್ ನಲ್ಲಿ ಮಾಡಿದ್ದಾರೆ. ಆದರೆ ಅವರ ಖಾತೆಗೆ ಆರೋಪಿಯಿಂದ ಹಣ ಜಮೆ ಆಗುವ ಬದಲು ಡಿ.8 ಅವರ ಖಾತೆಯಿಂದಲೇ 1,41,999 ರೂ. ಅಪರಿಚಿತ ಖಾತೆಗೆ ವರ್ಗಾವಣೆಗೊಂಡಿತ್ತು.
ಡಿ.9 ಆರೋಪಿಯು ಮತ್ತೆ ಕರೆ ಮಾಡಿ ಪುನಃ ಈ ಹಿಂದಿನಂತೆ ಯುಪಿಐ ಕೋಡ್ ಬಳಸುವಂತೆ ತಿಳಿಸಿದ್ದು, ಬಳಿಕ ಆರ್ಮಿ ಇಲಾಖೆಯಿಂದ ಹಣ ಪಾವತಿಯಾಗುತ್ತದೆ ಎಂದು ಹೇಳಿದ್ದಾನೆ.
ಇದನ್ನು ನಂಬಿದ ಹಿರಿಯ ನಾಗರಿಕರು ಅದೇ ರೀ ಮಾಡಿದ್ದು, ಪುನಃ 1 ಲ.ರೂ. ವರ್ಗಾವಣೆಯಾಗುತ್ತದೆ. ಹೀಗೆ ಆರೋಪಿಯು ಒಟ್ಟು ಆನ್ ಲೈನ್ ಮೂಲಕ ಸುಮಾರು 2,41,999 ರೂ. ಖಾತೆಯಿಂದ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.