ಉಡುಪಿ, ಡಿ 18 (DaijiworldNews/SK):ಸರಕಾರದಿಂದ 1200 ಎಕರೆ ಜಮೀನು ಪಡೆದ ಸುಜ್ಜಾನ್ ಕಂಪೆನಿ ಈಗ ನಷ್ಟ ಹೊಂದಿದ್ದು. ಈ ಸ್ಥಳವನ್ನು ಸರಕಾರಕ್ಕೆ ಹಿಂತುರಿಗಿಸದೆ ಖಾಸಗಿ ವ್ಯಕ್ತಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿದ ಅವ್ಯವಹಾರ ವಿರುದ್ಧ ಡಿ.23 ರಂದು ಕಂಪೆನಿಯ ಎದುರು ಬೃಹತ್ ಸಾರ್ವಜನಿಕ ಪ್ರತಿಭಟನೆ ಹಮ್ಮಿ ಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಅವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜರಗಿದ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಡಿ. 26 ರಂದು ಅಧ್ಯಕ್ಷರಾದ ಮಾನ್ಯ ಡಿ.ಕೆ.ಶಿವ ಕುಮಾರ್ ರವರು ಬೈಂದೂರು ಕ್ಷೇತ್ರದಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದು. ಈ ನಿಟ್ಟಿನಲ್ಲಿ ಜಿಲ್ಲೆಯ ಹೆಚ್ಚಿನ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸೊರಕೆಯವರು ಮಾತನಾಡಿ, ಜನ ಸಾಮಾನ್ಯರಿಗೆ ಕಾಂಗ್ರೆಸ್ ಸದಾ ಸ್ಪಂದಿಸುತ್ತದೆ ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಹಿಂದೂಗಳ ಭಾವನೆಗೆ ಧಕ್ಕೆಯಾದ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಹಗರಣ ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಬನೆಯ ಗುಜುರಿ ಅವ್ಯವಹಾರ ಪ್ರಕರಣವು ತನಿಖಾ ಹಂತದಲ್ಲಿದೆ. ಈಗ ಸುಜ್ಜಾನ್ ಕಂಪೆನಿಯ ಭೂ ಅವ್ಯವಹಾರದ ಬಗ್ಗೆ ಬೃಹತ್ ಜನಾಂದೋಲನ ಹಮ್ಮಿಕೊಳ್ಳಲಾಗಿದೆ. ಬಿಜೆಪಿಯ ಈ ಎಲ್ಲಾ ಕರ್ಮಕಾಂಡಗಳ ವಿರುದ್ಧ ಜನಜಾಗೃತಿ ಉಂಟು ಮಾಡಲು ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ಪಕ್ಷದ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ ಮುಂಬರುವ ನಗರಸಭೆಯ ಪೆರಂಪಳ್ಳಿ ವಾರ್ಡಿನ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದ ಶ್ರುತಿಯವರನ್ನು ಆಯ್ಕೆ ಮಾಡಿದ್ದು , ವಾರ್ಡಿನ ಸಮಗ್ರ ಅಭಿವೃದ್ಧಿಗಾಗಿ ಪಕ್ಷದ ಅಭ್ಯರ್ಥಿಯು ಜಯಗೊಳಿಸಲು ಎಲ್ಲಾ ಕಾರ್ಯಕರ್ತರು ತೊಡಗಿಸಿಕೊಳ್ಳುವಂತೆ ಮಾಡಿಕೊಂಡರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೊಲ್ಕೆಬೈಲ್ ,ವೆರೋನಿಕಾ ಕರ್ನೇಲಿಯೋ , ವಾಸುದೇವ ಯಡಿ ಯಾಳ, ದಿನೇಶ್ ಪುತ್ರನ್ , ಬಿ.ನರಸಿಂಹ ಮೂರ್ತಿ, ಮಹಾಬಲ ಕುಂದರ್ ,ಬಿಪಿನ್ ಚಂದ್ರಪಾಲ್ ನಕ್ರೆ, ಹರೀಶ್ ಕಿಣಿ, ಕೀರ್ತಿ ಶೆಟ್ಟಿ, ಪ್ರಖ್ಯಾತ ಶೆಟ್ಟಿ, ಹಿರಿಯಣ್ಣ, ಮುರಲಿ ಶೆಟ್ಟಿ, ಡಾ/ಸುನಿತಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ರೋಶನಿ ಒಲಿವರಾ, ರಮೇಶ್ ಕಾಂಚನ್, ಸದಾಶಿವ ದೇವಾಡಿಗ, ನೀರೆ ಕೃಷ್ಣ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ಶಶಿಧರಶೆಟ್ಟಿ ಎಲ್ಲೂರು, ರೋಶನ್ ಶೆಟ್ಟಿ, ಕಿರಣ್ ಹೆಗ್ಡೆ, ರತ್ನಾಕರ ಪೂಜಾರಿ, ಕಿಶೋರ್ ಕುಮಾರ್ ಎರ್ಮಾಳು , ಬಾಲಕೃಷ್ಣ ಪೂಜಾರಿ,ಹರೀಶ್ ಶೆಟ್ಟಿ ಪಾಂಗಾಳ, ಅಬ್ದುಲ್ ಅಜೀಜ್, ಸುರೇಶ್ ಶೆಟ್ಟಿ, ಬನ್ನಂಜೆ, ಗಣೇಶ್ ನೆರ್ಗಿ, ವಾಹಿದ್ ಜಯಕುಮಾರ್, ರಮಾನಂದ್ಪೈ, ಉದ್ಯಾವರ ನಾಗೇಶ್ ಕುಮಾರ್ , ವಿಶ್ವಾಸ್ ಅಮೀನ್, ಸತೀಶ್ ಕೊಡವೂರು, ಸೌರಭ ಬಲ್ಲಾಳ್, ಲೂಯಿಸ್ ಲೋಬೋ,ಸುನಿಲ್ ಬಂಗೇರ, ಸುಲೋಚನಾ ದಾಮೋದರ್ ಉಪಸ್ಥಿತರಿದ್ದರು.