ಮಂಗಳೂರು,ಡಿ 18 (DaijiworldNews/AK): ಜೆಪ್ಪುವಿನ ಬಳಿ ನಿರ್ಮಾಣ ಹಂತದ ರೈಲ್ವೇ ಅಂಡರ್ ಬಿಡ್ಜ್ ಕುಸಿದು ಮೂವರಿಗೆ ಗಾಯಗಳಾದ ಘಟನೆ ಸೋಮವಾರ ಸಂಜೆ ನಡೆದಿದೆ.
ರೈಲ್ವೆಅಂಡರ್ ಬಿಡ್ಜ್ (RuB)ಗಾಗಿ ಸ್ಲ್ಯಾಬ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕಾಮಗಾರಿಯ ವೇಳೆ ಕುಸಿದು ಸೇತುವೆ ಕುಸಿದು ಬಿದ್ದಿದೆ. ಸಂಜೆ 5.30 ರ ವೇಳೆ ಈ ಘಟನೆ ನಡೆದಿದ್ದು, ಸುಮಾರು 12 ಮಂದಿ ಕೆಲಸದಲ್ಲಿ ತಲ್ಲೀರಾಗಿದ್ದ ವೇಳೆ ಬ್ರಿಡ್ ಕುಸಿದು ಬಿದ್ದಿದೆ. ಕಾರ್ಮಿಕರು ಪವಾಡ ಸದೃಶ್ಯ ಪಾರಾಗಿದ್ದಾರೆ. ಈ ವೇಳೆ ಮೂವರು ಕಾರ್ಮಿಕರಿಗೆ ಗಾಯಗಳಾಗಿವೆ.
ಸ್ಲ್ಯಾಬ್ ನಿರ್ಮಾಣಕ್ಕಾಗಿ 10 ಲೋಡ್ ಕಾಂಕ್ರೀಟ್ ಹಾಕಿ 11 ನೇ ಲೋಡ್ ಕಾಂಕ್ರಿಟ್ ನ್ನು ಸ್ಲ್ಯಾಬ್ಗೆ ಹಾಕಿದಾಗ ಬ್ರಿಡ್ಜ್ ಕುಸಿದಿದೆ. ಸೇತುವೆ ಕಾಮಗಾರಿ ಕಳೆದ ಆರು ತಿಂಗಳಿಂದ ನಡೆಯುತ್ತಿತ್ತು.
ಮುಂಬೈ ಮೂಲದ ಸಂಸ್ಥೆ ವಿಜಯ್ ಇನ್ಫ್ರಾ ಪ್ರಾಜೆಕ್ಟ್ ಖಾಸಗಿ ಲಿಮಿಟೆಡ್ ಸೇತುವೆ ಕಾಮಗಾರಿ ಗುತ್ತಿಗೆವಹಿಸಿಕೊಂಡಿದ್ದು, 50 ಕೋಟಿ ಮೌಲ್ಯದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದೇ ಸಂಸ್ಥೆ ನಗರದ ಪಡೀಲ್ ಅಂಡರ್ಪಾಸ್ ಕಾಮಗಾರಿ ನಡೆಸಿತ್ತು.
ನಾನು 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ, ಇದೇ ಮೊದಲ ಬಾರಿಗೆ ಇಂತಹ ಘಟನೆ ಸಂಭವಿಸಿದೆ ಎಂದು ಗುತ್ತಿಗೆದಾರರು ಹೇಳುತ್ತಾರೆ. ಅದೇ ಏಜೆನ್ಸಿಯು ಪಡೀಲ್ ಅಂಡರ್ಪಾಸ್ ಅನ್ನು ಕೈಗೊಂಡಿದೆ