ಕಾಸರಗೋಡು , 16(Daijiworldgews/RA):ಕಾಸರಗೋಡು ಮೂಲದ ಯುವ ವಿಜ್ಞಾನಿ ರೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ.
ಕಾಸರಗೋಡು ಸೂರ್ಲು ನಿವಾಸಿ ಕೆ. ಅಶೋಕ್ (42) ಮೃತ ಪಟ್ಟವರು. ಇವರು ಚಂದ್ರಯಾ ನ್ -3 ನಲ್ಲಿ ಭಾಗಿಯಾಗಿದ್ದರು. ಮಂಡಿ ನೋವು ಶಸ್ತ್ರ ಕ್ರಿಯೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದ ಆಶೋಕ್ ಹೃದಯಾಘಾತಕ್ಕೆ ಒಳಗಾಗಿ ಕೊನೆಯಿಸಿರುಲೆಳೆದಿದ್ದಾರೆ.
ಕೂಡ್ಲು ಗೋಪಾಲಕೃಷ್ಣ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಬಳಿಕ ಕಾಸರಗೋಡು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಪೆರಿಯ ಪಾಲಿ ಟೆಕ್ನಿಕ್ ನಲ್ಲಿ ಮೂರು ವರ್ಷ ಶಿಕ್ಷಣ ಪಡೆದು ಬಳಿಕ ತಿರುವನಂತಪುರದ ಇಸ್ರೋ ದಲ್ಲಿ ತರಬೇತಿಗೆ ಸೇರ್ಪಡೆಗೊಂಡರು. ಬಳಿಕ ಬೆಂಗಳೂರಿನ ಐ ಎಸ್ ಆರ್ ಒ ದಲ್ಲಿ ಉದ್ಯೋಗಕ್ಕೆ ಸೇರ್ಪಡೆ ಗೊಂಡರು.