ಕಾಸರಗೋಡು, 16(DaijiworldNews/AK): ದಾಖಲೆಗಳಿಲ್ಲದೆ ಸುಮಾರು 20 ಲಕ್ಷ ರೂ. ವನ್ನು ಕಾಸರಗೋಡು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದು, ಓರ್ವ ನನ್ನು ಬಂಧಿಸಿದ್ದಾರೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ನಗರದಿಂದ ಕಾರನ್ನು ತಡೆದು ತಪಾಸಣೆ ನಡೆಸಿದಾಗ 20 ಲಕ್ಷ ರೂ. ಕರೆನ್ಸಿ , ಐದು ಲಕ್ಷ ರೂ. ಮುಖ ಬೆಲೆಯ ಅಮೆರಿಕನ್ ಡಾಲರ್ ಹಾಗೂ ದಿರಂ ಪತ್ತೆಯಾಗಿದೆ.
ಎರಿಯಾಲ್ ನಿವಾಸಿ ಮುಸ್ತಾಫಾ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.