ಕಾಸರಗೋಡು , 16(DaijiworldNews/AK): ಅಳ ಸಮುದ್ರದಲ್ಲಿ ಸಿಲುಕಿದ್ದ 12 ಮಂದಿ ಬೆಸ್ತರನ್ನು ಕರಾವಳಿ ಪೊಲೀಸ್ ಹಾಗೂ ಮೀನುಗಾರರು ರಕ್ಷಿಸಿದ ಘಟನೆ ಉಪ್ಪಳ - ಕುಂಬಳೆ ನಡುವಿನ ಸಮುದ್ರ ದಲ್ಲಿ ನಡೆದಿದೆ.
ಮೂರು ದಿನಗಳ ಹಿಂದೆ ನೀಲೇಶ್ವರ ಕಡಲ ತೀರದಿಂದ ಬೋಟ್ ನಲ್ಲಿ ಮೀನುಗಾರರು ಆಳ ಸಮುದ್ರದಲ್ಲಿ ಸಿಲುಕಿದ್ದರು. ಬೋಟ್ನ ಇಂಜಿನ್ ದೋಷ ದಿಂದ ಸಿಲುಕಿಕೊಂಡ ಮೀನುಗಾರರು ನೀರು ಆಹಾರ ಇಲ್ಲದೆ ಸಿಲುಕಿ ಕೊಂಡರು.
ಮೊಬೈಲ್ ಗೆ ರೇಂಜ್ ಲಭಿಸದೆ ಮತ್ತಷ್ಟು ಕಂಗಾಲಾದರು ಬೆಸ್ತರು. ಕೊನೆಗೂ ಶುಕ್ರವಾರ ಕುಂಬಳೆ ಶಿರಿಯ ದಲ್ಲಿರುವ ಕರಾವಳಿ ಪೊಲೀಸರಿಗೆ ಮೊಬೈಲ್ ಸಂಪರ್ಕ ಲಭಿಸಿದ್ದರಿಂದ ಮಾಹಿತಿ ನೀಡಿದ್ದು, ಕೂಡಲೇ ಕಾರ್ಯ ಪ್ರವೃತ್ತ ರಾದ ಕರಾವಳಿ ಪೊಲೀಸರು ಮೀನು ಗಾರರ ನೆರವಿನಿಂದ ಸಿಲುಕಿದ್ದ ಬೆಸ್ತರನ್ನು ಕುಂಬಳೆ ಕಡಲ ಕಿನರೆಗೆ ತಲುಪಿಸುವಲ್ಲಿ ಯಶಸ್ವಿಯಾದರು.
ಸಿಲುಕಿದ್ದ ಬೋಟ್ ನ್ನು ಕರಾವಳಿ ಪೊಲೀಸರ ಬೋಟ್ ಗೆ ಹಗ್ಗದಿಂದ ಕಟ್ಟಿ ತೀರಕ್ಕೆ ತಲಪಿಸಲಾಯಿತು.