ಉಡುಪಿ, ಡಿ 16 (DaijiworldNews/AK): 2023ನೇ ಜನವರಿ ತಿಂಗಳಿಂದ ಕಳವಾದ ದೂರಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಣಿಪಾಲ ರಾಣಾ ವ್ಯಾಪ್ತಿಯಲ್ಲಿ ಪತ್ತೆ ಹಚ್ಚಿ ಸುಮಾರು3 .5 ಲಕ್ಷ ಮೌಲ್ಯದ 18 ಮೊಬೈಲ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಡಿಸೆಂಬರ್ 16 ರಂದು ಈಶ್ವರ ನಗರದ ದಿಯಾಂಜಲಿ ಹಾಗೂ ಅವರ ಸ್ನೇಹಿತಯ ಫೋನ್ಗಳನ್ನು ಕ್ರಮವಾಗಿ ನ. 5 ಮತ್ತು ನ. 27 ರಂದು ಕದ್ದ ಬಗ್ಗೆ ದೂರು ದಾಖಲಿಸಿದ್ದಾರೆ. 15,000 ಮತ್ತು 20,000 ರೂ.ಮೌಲ್ಯದ ಮೊಬೈಲ್ ಆಗಿದೆ. ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕದ್ದ ಫೋನ್ಗಳನ್ನು ಸಿಇಐಆರ್ ಪೋರ್ಟಲ್ನಲ್ಲಿ ನೋಂದಾಯಿಸಲಾಗಿದ್ದು, ಆರೂರು ಗ್ರಾಮದ ದೀಕ್ಷಿತ್ (27) ಎಂಬಾತ ಅವುಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ದೀಕ್ಷಿತ್ ನನ್ನು ಬಂಧಿಸಲಾಗಿದ್ದು, ಆತನಿಂದ ವಿವಿಧ ಸ್ಥಳಗಳಿಂದ ಕದ್ದ ಆರು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಮೊಬೈಲ್ಗಳನ್ನು ಪತ್ತೆ ಹಚ್ಚುವಲ್ಲಿ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕರಾದ ದೇವರಾಜ ಟಿ.ವಿ ರವರ ನೇತೃತ್ವದಲ್ಲಿ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ಸಿ, ಅಕ್ಷಯ ಕುಮಾರಿ ಎಸ್ ಎನ್, ಸಿಬ್ಬಂದಿಗಳಾದ ಎ.ಎಸ್.ಐ ವಿವೇಕಾನಂದ ಬಿ, ಅಬ್ದುಲ್ ರಜಾಕ್, ಚೆನ್ನೇಶ್, ಮಂಜುನಾಥ ಎಂ.ಆರ್, ಸುರೇಶ್ ಪಾಟೀಲ್, ಶುಭಾ ರವರ ತಂಡವು ಕಾರ್ಯನಿರ್ವಹಿಸಿತ್ತು
ಠಾಣಾ ಪ್ರಕರಣದಲ್ಲಿ ಒಳಗೊಂಡ ಮೊಬೈಲ್ ಸೇರಿದಂತೆ CEIR PORTAL ಮೂಲಕ 18 ಮೊಬೈಲ್ ಫೋನ್ಗಳನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ಧಲಿಂಗಪ್ಪ ಟಿ ರವರು ಮಣಿಪಾಲ ಠಾಣೆಯಲ್ಲಿ ವಾರೀಸುದಾರರಿಗೆ ಹಸ್ತಾಂತರಿಸಿದರು.
ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್ನನ್ನು Central Equipment Identity Register (CEIR Portal) ನಲ್ಲಿ ನಮೂದಿಸಿದ್ದಲ್ಲಿ ಪೊಲೀಸರು ಪತ್ತೆ ಮಾಡಲು ಅನುಕೂಲವಾಗುತ್ತದೆ ಹಾಗೂ ಸಾರ್ವಜನಿಕರು ಕಳೆದುಕೊಂಡ ಮೋಬೈಲ್ ಫೋನ್ಗಳ ದುರ್ಬಳಕೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಆದುದರಿಂದ ಸಾರ್ವಜನಿಕರು ಮೊಬೈಲ್ ಕಳೆದುಕೊಂಡಲ್ಲಿ CEIR Portal ನಲ್ಲಿ ನಮೂದಿಸುವಂತೆ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ